ಇಂಜಿನ್ ವೈಫಲ್ಯ: ದಡ ಸೇರಿದ ಬೋಟು; ಮೀನುಗಾರರು ಪ್ರಾಣಾಪಾಯದಿಂದ ಪಾರು
ಮಂಗಳೂರು, ನ.5: ಅರಬ್ಬಿ ಸಮುದ್ರದ ಮಧ್ಯೆ ಇಂಜಿನ್ ವೈಫಲ್ಯಕ್ಕೊಳಗಾದ ಮೀನುಗಾರಿಕಾ ಬೋಟ್‌ವೊಂದು ತೇಲಿಕೊಂಡು ಬಂದು ಪಣಂಬೂರು ಗ್ರಾಮದ ಚಿತ್ರಾಪುರ ಎಂಬಲ್ಲಿ ದಡ ಸೇರಿದ್ದು, ಬೋಟಿನಲ್ಲಿದ್ದ ಎಲ್ಲ ಆರು ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಳ್ಳಾಲ ಮೊಗವೀರಪಟ್ಣ ನಿವಾಸಿಯೊಬ್ಬರ ಪರ್ಸಿನ್ ಬೋಟ್ ಇದಾಗಿದ್ದು, ಸಮುದ್ರಕ್ಕಿಳಿದ ಕೆಲ ಗಂಟೆಗಳಲ್ಲಿ ಇಂಜಿನ್ ವೈಫಲ್ಯಕ್ಕೀಡಾಗಿತ್ತು. ರಾತ್ರಿ ಗಾಳಿಯ ರಭಸ ಜೋರಾಗಿದ್ದುದರಿಂದ ಗುರುವಾರ ನಸುಕಿನ ವೇಳೆಗೆ ದಡಕ್ಕೆ ತೇಲಿಕೊಂಡು ಬಂದಿತ್ತು.
ಬೋಟ್‌ನಲ್ಲಿ ಆರು ಮಂದಿ ಮೀನುಗಾರರಿದ್ದು, ಇಂಜಿನ್ ವೈಫಲ್ಯದ ಬಳಿಕ ಕಂಗಾಲಾಗಿದ್ದರು. ಕೊನೆಗೂ ದಡ ಸೇರುವುದರೊಂದಿಗೆ ನಿಟ್ಟುಸಿರುಬಿಟ್ಟಿದ್ದಾರೆ.
Next Story





