ಮತಗಟ್ಟೆಯ ಹಂತದಿಂದಲೇ ಪಕ್ಷ ಸಂಘಟನೆಗೆ ಮೊದಲ ಆದ್ಯತೆ -ನಳಿನ್ ಕುಮಾರ್ ಕಟೀಲ್
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಾರೋಪ

ಮಂಗಳೂರು, ನ. 5: ರಾಜ್ಯದ ಬಿಜೆಪಿ ಅಧ್ಯಕ್ಷನಾಗಿ ಮತಗಟ್ಟೆಯ ಹಂತದಿಂದಲೆ ತಳ ಮಟ್ಟದಿಂದ ಪಕ್ಷ ಸಂಘಟನೆಯೆ ನನ್ನ ಪ್ರಮುಖ ಗುರಿಯಾಗಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ನಗರದ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ಇಂದು ಬೆಳಗ್ಗಿನಿಂದ ಸಂಜೆ ವರೆಗೆ ನಡೆದ ರಾಜ್ಯಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾ ಡುತ್ತಿದ್ದರು.
ಭಾರತೀಯ ಜನತಾ ಪಕ್ಷ ಕರಾವಳಿಯಲ್ಲಿ ಹಂತ ಹಂತವಾಗಿ ಬೆಳೆದು ಇಂದು ರಾಜ್ಯದ ಇತರ ಜಿಲ್ಲೆಗಳಿಗೆ ಮಾದರಿಯಾಗುವ ರೀತಿ ಸಂಘಟಿತ ವಾಗಿದೆ.ಚುನಾವಣೆಯಲ್ಲಿ ಯೂ ಉತ್ತಮ ಪ್ರಗತಿ ಸಾಧಿಸಿದೆ.ಇದೇ ರೀತಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪಕ್ಷವನ್ನು ಮತಗಟ್ಟೆಯ ಹಂತದಿಂದ ಬಲಿಷ್ಟ ಗೊಳಿಸು ವ ನಿಟ್ಟಿನಲ್ಲಿ ಕಾರ್ಯಯೋಜನೆ ಹಮ್ಮಿಕೊ ಳ್ಳಲಾಗಿದೆ. ಈ ನಿಟ್ಟಿನಲ್ಲಿ ಪಂಚರತ್ನ,ಪೇಜ್ ಪ್ರಮುಖರ ಮೂಲಕ ಇನ್ನಷ್ಟು ಕಾರ್ಯಕರ್ ತರಿಗೆ ಸಂಘಟನೆಯಲ್ಲಿ ಅವಕಾಶ ನೀಡಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸಭೆಯಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ, ಸಚಿವರಾದ ಈಶ್ವರಪ್ಪ,ಗೋವಿಂದ ಕಾರಜೋ ಳ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಕೋಟ ಶ್ರೀ ನಿವಾಸ ಪೂಜಾರಿ, ಶಾಸಕ ಅರವಿಂದ ಲಿಂಬಾವಳಿ ಮೊದಲಾದ ವರು ಉಪಸ್ಥಿತರಿದ್ದರು.
ಕಾರ್ಯ ಕಾರಿಣಿ ಸಮಿತಿ ನಿರ್ಣಯ :- ಇಂದು ನಡೆದ ಕಾರ್ಯ ಕಾರಿಣಿ ಸಭೆಯಲ್ಲಿ ಮೂರು ಪ್ರಮುಖ ನಿರ್ಣಯ ಗಳನ್ನು ತೆಗೆದು ಕೊಳ್ಳಲಾಯಿತು.
1) ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಬೆಂಬಲಿಸುವುದು. 2)ರೈತರ ಆದಾಯ ದ್ವಿಗುಣ ಗೊಳಿಸಲು ಸರಕಾರ ಜಾರಿಗೊಳಿ ಸಿರುವ ಕಾನೂನನ್ನು ಬೆಂಬಲಿಸುವುದು. 3)ನೆರೆ ಸಂತ್ರಸ್ತರಿಗೆ ರಾಜ್ಯದ ಮುಖ್ಯ ಮಂತ್ರಿ ಕೈ ಗೊಂಡ ಪರಿಹಾರ ಕ್ರಮಗಳು ಹಾಗೂ ಕೋವಿಡ್ -19ನಿಯಂತ್ರಣದಲ್ಲಿ ಕೈಗೊಂಡ ರಾಜ್ಯ ಸರಕಾರದ ಕ್ರಮಗಳ ಬಗ್ಗೆ ಮುಖ್ಯ ಮಂತ್ರಿಗೆ ಶ್ಲಾಘನೆ ವ್ಯಕ್ತ ಪಡಿಸಲಾಯಿತು.
ಇದೇ ಸಂದರ್ಭದಲ್ಲಿ ಕೋರ್ ಕಮಿಟಿ ಯ ನಿರ್ಣಯಗಳನ್ನು ಬೆಂಬಲಿಸಲು ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ ನಿರ್ಣಯ ಕೈ ಗೊಂಡಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.







