ಮೃತ ಕೈದಿಗಳ ಅವಲಂಬಿತರ ಅಹವಾಲು ಸ್ವೀಕಾರ
ಮಂಗಳೂರು, ನ.5: ಕಾರಾಗೃಹಗಳಲ್ಲಿ 2012ರ ಜನವರಿ 1ರಿಂದ 2019ರ ಮೇ 31 ರವರೆಗಿನ ಅವಧಿಯಲ್ಲಿ ಸಂಭವಿಸಿದ ಕೈದಿಗಳ ಅಸ್ವಾಭಾವಿಕ ಮರಣ ಪ್ರಕರಣಗಳಲ್ಲಿ ಮೃತರ ಅವಲಂಬಿತರಿಗೆ ಮೋಟಾರ್ ವೆಹಿಕಲ್ ಕಾಯ್ದೆಯ ಸೆಕ್ಷನ್ 163 ಎ ರ ಅಡಿಯಲ್ಲಿ ನಿಗದಿಪಡಿ ಸಲಾಗಿರುವ ಪರಿಹಾರ ಮೊತ್ತವನ್ನು ವಿತರಿಸಲು ಸರ್ವೋಚ್ಚ ನ್ಯಾಯಾಲಯವು 2020ರ ಜ.27ರಂದು ನೀಡಿರುವ ಆದೇಶದಲ್ಲಿ ತಿಳಿಸಿದೆ.
ಅದರಂತೆ ದ.ಕ. ಜಿಲ್ಲೆಯ ಕಾರಾಗೃಹಗಳಲ್ಲಿ ಅಸ್ವಾಭಾವಿಕ ಮರಣ ಹೊಂದಿದ ಬಂಧಿಗಳ ಪ್ರಕರಣಗಳಲ್ಲಿ ಅವಲಂಬಿತರಿಗೆ ಪರಿಹಾರ ಮೊತ್ತ ವಿತರಿಸಬೇಕಾಗಿದ್ದು ದಾಖಲೆಗಳಂತೆ ಮೃತ ಹೊಂದಿದ ಖೈದಿಗಳಾದ ಸಿಟಿಪಿ 1739 ವಾಸಪ್ಪಗೌಡ ಅವರ ಅವಲಂಬಿತೆ ಜಾನಕಿ ಕೋಂ ವಾಸಪ್ಪಗೌಡ, ಮುಗ್ಗೇಹದಕ್ ಮುಗೂರು ಗ್ರಾಮ ಬೆಳ್ತಂಗಡಿ, ಯುಟಿಪಿ 4930 ಮಾಡೂರು ಯೂಸುಫ್ ಅವಲಂಬಿತ ಜಸೀಮಾ ಫಿರ್ದೋಸಾ, ಝೀನತ್ ಮಂಝಿಲ್ ಮಾಡೂರು ಕೋಟೆಕಾರ್ ಉಳ್ಳಾಲ, ಯುಟಿಪಿ 6364 ಕೇಶವ್ ಗೌಡ ಅವಲಂಬಿತ ಕೃಷ್ಣ ಗೌಡ ಕಳಂಜ ಮನೆ ಸುಳ್ಯ, ಹಾಗೂ ಯುಟಿಪಿ 9359 ಮುಸ್ತಫಾ ಅವಲಂಬಿತ ತೋವಲ್ ಹಳೆಯ ಕಾವೂರು ಪೊಲೀಸ್ ಠಾಣೆ ಶಾಂತಿನಗರ ಕಾವೂರು ಅವರು ಅಥವಾ ಮೃತರ ಇತರ ಅವಲಂಬಿತರು ತಮ್ಮ ಕ್ಲೇಮುಗಳನ್ನು ನ.11ರೊಳಗೆ ದ.ಕ.ಜಿಲ್ಲಾಧಿಕಾರಿಗೆ ಪೂರಕ ದಾಖಲೆ ಸಲ್ಲಿಸಲು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.





