ಪ್ರಥಮ್ ಬುಕ್ಸ್ ನಿಂದ ಕತೆ ಕೇಳುವ ಕಾರ್ಯಕ್ರಮ
ಬೆಂಗಳೂರು, ನ.5: ಕಾಗ್ನಿಜಂಟ್ ಫೌಂಡೇಶನ್ ಸಹಯೋಗದೊಂದಿಗೆ ಪ್ರಥಮ್ ಬುಕ್ಸ್ ವತಿಯಿಂದ ಮಕ್ಕಳಿಗಾಗಿ ಮಿಸ್ಡ್ ಕಾಲ್ ಕೊಡಿ ಕತೆ ಕೇಳಿ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ.
ಮಕ್ಕಳು 080-68264448 ಈ ನಂಬರ್ ಗೆ ತಮ್ಮ ಮನೆಯ ಮೊಬೈಲ್‍ನಿಂದ ಮಿಸ್ಡ್ ಕಾಲ್ ಕೊಡುವ ಮೂಲಕ ಫೋನ್‍ನಲ್ಲಿಯೇ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಗಳಲ್ಲಿ ಮಕ್ಕಳ ಕತೆಗಳನ್ನು ಕೇಳಬಹುದಾಗಿದೆ.
ಬೇಸಿಕ್ ಹ್ಯಾಂಡ್ ಸೆಟ್ ಮೂಲಕವೂ ಮಿಸ್ಡ್ ಕಾಲ್ ಕತೆಯನ್ನು ಕೇಳಬಹುದು. ಮಿಸ್ಡ್‍ಕಾಲ್‍ಗೆ ಯಾವುದೇ ಶುಲ್ಕವಿರುವುದಿಲ್ಲ. ಮಿಸ್ಡ್ ಕಾಲ್ ಕೊಟ್ಟರೆ ನಂತರ ಸಂಸ್ಥೆಯಿಂದ ಮರು ಕರೆ ಬರುತ್ತದೆ. ಆಗ ಭಾಷೆ, ಮಕ್ಕಳ ವಯಸ್ಸಿಗನುಗುಣವಾಗಿ ಕತೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುತ್ತದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಿಯಾ ದೇಸಾಯಿ priya@prathambooks.org,, 99809 78456ಕ್ಕೆ ಕರೆ ಮಾಡಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





