ಮಂಗಳೂರು: ಮರ್ಸಿಡಿಸ್-ಬೆಂಝ್ ಸುಂದರಂ ಮೋಟರ್ಸ್‌ನಿಂದ ಮೊದಲ 'ಮೇಡ್ ಇನ್ ಇಂಡಿಯಾ' ಎಎಂಜಿ ಬಿಡುಗಡೆ

ಮಂಗಳೂರು,ನ. 5: ಬೆಂಗಳೂರಿನ ಸುಂದರಂ ಮೋಟರ್ಸ್ ಆ್ಯಂಡ್ ಎಎಂಜಿ ಪರ್ಫಾರ್ಮನ್ಸ್ ಸೆಂಟರ್ ಮೊಟ್ಟಮೊದಲ ‘ಮೇಡ್ ಇನ್ ಇಂಡಿಯಾ’ ನೂತನ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 ಕೂಪೆಯನ್ನು ಬುಧವಾರ ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದೆ. ನೂತನ ಕಾರನ್ನು ಮಂಗಳೂರು ಸುಂದರಂ ಮೋಟರ್ಸ್ ಸೇವಾ ಕೇಂದ್ರದಲ್ಲಿ ನ.8ರವರೆಗೆ ಪ್ರದರ್ಶನಕ್ಕಿಡಲಾಗಿದೆ.
ಇದೇ ಸಂದರ್ಭ ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಎಎಂಜಿ ಪರ್ಫಾರ್ಮನ್ಸ್ ಸೆಂಟರ್ (ಎಪಿಸಿ) ಆರನೇ ವರ್ಷಕ್ಕೆ ಕಾಲಿರಿಸಿದೆ. ವಿಶ್ವಾದ್ಯಂತ ಕೆಲವೇ ಎಪಿಸಿಗಳಿದ್ದು, ಎಪಿಸಿ ಬೆಂಗಳೂರು ಮರ್ಸಿಡಿಸ್-ಬೆಂಝ್ ದಕ್ಷಿಣ ಭಾರತದಲ್ಲಿ ಸ್ಥಾಪಿಸಿದ ಮೊದಲ ಎಕ್ಸ್‌ಕ್ಲೂಸಿವ್ ಎಎಂಜಿ ಫೆಸಿಲಿಟಿಗಳಲ್ಲೊಂದಾಗಿದೆ.
ನಾಲ್ಕು ಎಎಂಜಿಗಳಿಗೆ ಸ್ಥಳಾವಕಾಶವನ್ನು ಹೊಂದಿರುವ ಎಪಿಸಿ ಬೆಂಗಳೂರು 2014ರಲ್ಲಿ ಸ್ಥಾಪನೆಯಾದಾಗಿನಿಂದಲೂ ಕರ್ನಾಟಕ ಮತ್ತು ಸುತ್ತಲಿನ ವಾಹನಪ್ರಿಯರ ನೆಚ್ಚಿನ ತಾಣವಾಗಿದೆ. ಕರ್ನಾಟಕದ ರಸ್ತೆಗಳಲ್ಲಿ ಪ್ರಸ್ತುತ ಸುಮಾರು 170 ಎಎಂಜಿಗಳು ಸಂಚರಿಸುತ್ತಿದ್ದು, ಕಾರು ದಿನೇ ದಿನೇ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ.
ನೂತನ ಜಿಎಲ್‌ಸಿ 43ರ ಜೊತೆ ಅನುಕೂಲಕರ ಸರ್ವಿಸ್ ಪ್ಯಾಕೇಜ್‌ಗಳು ಕೈಗೆಟಕುವ ಬೆಲೆಗಳಲ್ಲಿ ಲಭ್ಯವಿವೆ. ಸುಂದರಂ ಮೋಟರ್ಸ್ ಆಯ್ದ ಮಾಡೆಲ್‌ಗಳಿಗೆ ಶೇ.7.99 ಆರ್‌ಒಐನಂತಹ ಅತ್ಯುತ್ತಮ ಹಣಕಾಸು ಸೇವೆಗಳನ್ನೂ ಒದಗಿಸುತ್ತಿದೆ. ಮೇಡ್ ಇನ್ ಇಂಡಿಯಾ ಜಿಎಲ್‌ಸಿ 43 ಹಿಂದಿನ ಸಿಬಿಯು ಆವೃತ್ತಿಯಲ್ಲಿರದಿದ್ದ ಹೆಚ್ಚಿನ ಸೌಲಭ್ಯಗಳು ಮತ್ತು ತಂತ್ರಜ್ಞಾನವನ್ನು ಒಳಗೊಂಡಿದೆ.
ನೂತನ ಮರ್ಸಿಡಿಸ್-ಎಎಂಜಿ ಜಿಎಲ್‌ಸಿ 43 4 ಮ್ಯಾಟಿಕ್‌ನ ಶೋರೂಮ್ ಬೆಲೆ 76.70 ಲಕ್ಷ ರೂ. ಗಳಾಗಿವೆ.
ಎಎಂಜಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎಪಿಸಿಗೆ ಭೇಟಿ ನೀಡಬಹುದು ಅಥವಾ ಮೊ.ಸಂಖ್ಯೆ +91-9148155175ಕ್ಕೆ ಕರೆ ಮಾಡಬಹುದು ಅಥವಾ panchajanya.c@sundarammotors.comಗೆ ಇಮೇಲ್ ಮಾಡಬಹುದು ಎಂದು ಪ್ರಕಟಣೆಯು ತಿಳಿಸಿದೆ.








