ಕೆಟ್ಟ ಚಟ ಬಿಟ್ಟು ಸನ್ನಡತೆಯಿಂದ ಮುನ್ನಡೆಯೋಣ : ಎಸ್ಐ ವಿನೋದ್ ರೆಡ್ಡಿ

ವಿಟ್ಲ : ಯುವ ಸಮೂಹ ಕೆಟ್ಟ ಚಟಕ್ಕೆ ಬಲಿಯಾಗುತ್ತಿದೆ. ನಮ್ಮ ಸ್ನೇಹಿತರ ಬಳಗದಿಂದ ಪರಿಣಾಮ ಬೀರುತ್ತದೆ. ಒಳ್ಳೆಯವರ ಸಂಗ ಬೆಳೆಸಿದರೆ ಉತ್ತಮರಾಗುತ್ತೇವೆ. ಕೆಟ್ಟವರ ಸಂಗದಿಂದ ದುಷ್ಚಟ ದಾಸರಾಗುತ್ತಾರೆ. ಇದು ಸಲ್ಲದು ಎಂದು ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ವಿನೋದ್ ರೆಡ್ಡಿ ಹೇಳಿದರು.
ಅವರು ಶುಕ್ರವಾರ ಉಕ್ಕುಡ ಬದ್ರಿಯಾ ಜುಮಾ ಮಸೀದಿಯಲ್ಲಿ ಜುಮಾ ನಮಾಜ್ ಬಳಿಕ ವಿಟ್ಲ ಪೊಲೀಸ್ ಠಾಣೆಯ ವತಿಯಿಂದ ನಡೆದ ಮಾದಕ ವ್ಯಸನ ಮುಕ್ತ ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕವ್ಯಸನಿಗಳು, ಅದರ ವ್ಯಾಪಾರಿಗಳು, ವಿದೇಶದಿಂದ ಕರೆ ಮಾಡಿ ಬೆದರಿಸುವವರು ಇದ್ದರೆ ನಮಗೆ ಗೌಪ್ಯ ಮಾಹಿತಿ ನೀಡಿ. ಅಂತಹವರ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಜೊತೆಗೆ ರಸ್ತೆ ನಿಯಮವನ್ನು ಪಾಲಿಸಿರಿ ಎಂದು ಎಸ್ಐ ವಿನೋದ್ ರೆಡ್ಡಿ ಸಲಹೆ ನೀಡಿದರು.
ಉಕ್ಕುಡ ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಅಹ್ಮದ್ ಶರೀಫ್ ಸಖಾಫಿ ಮಾತನಾಡಿ ಮಾದಕ ವ್ಯಸನ ಮುಕ್ತ ಜಮಾಅತ್ ಆಗಿ ಉಕ್ಕುಡವನ್ನು ಪರಿವರ್ತಿಸೋಣ ಎಂದು ಹೇಳಿದರು.
ಪ್ರೊಬೆಷನರಿ ಎಸ್ಐ ಕೃಷ್ಣಪ್ರಸಾದ್, ಸಿಬ್ಬಂದಿ ಪ್ರವೀಣ್ ಅವರು ಉಪಸ್ಥಿತರಿದ್ದರು. ಜಮಾಅತ್ ಕಮಿಟಿ ಸದಸ್ಯರಾದ ರಶೀದ್ ವಿಟ್ಲ ಸ್ವಾಗತಿಸಿ ವಂದಿಸಿದರು.






.jpeg)
.jpeg)
.jpeg)


