ಖಾರದಪುಡಿ ಬಳಸಿ ದರೋಡೆಗೆ ಯತ್ನ : ಇಬ್ಬರು ಆರೋಪಿಗಳು ಸೆರೆ

ಶಿವಮೊಗ್ಗ : ಖಾರದ ಪುಡಿ ಬಳಸಿಕೊಂಡು ಸುಲಿಗೆ ಮಾಡಲು ಹೊಂಚು ಹಾಕುತ್ತಿದ್ದ ಆರೋಪದಲ್ಲಿ ಇಬ್ಬರನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋಪಾಳದಿಂದ ಅನುಪಿನ ಕಟ್ಟೆಗೆ ಹೋಗುವ ಮಾರ್ಗದಲ್ಲಿನ ಚಾನೆಲ್ ನ ಸೇತುವೆ ಬಳಿ ಮಾರಕಾಸ್ತ್ರವನ್ನ ಹಿಡಿದ ಐವರ ತಂಡವೊಂದು ದರೋಡೆಗೆ ಹೊಂಚು ಹಾಕುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ತುಂಗಾನಗರ ಠಾಣೆ ಪಿಎಸ್ಐ ತಿರುಮಲೇಶ್ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿದೆ.
ಬಂಧಿತರನ್ನು ಝಬೈರ್, ಸಾದಿಕ್ ಶೇಕ್ ಎಂದು ಗುರುತಿಸಲಾಗಿದೆ. ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ. ಖಾರದ ಪುಡಿ, ಕಬ್ಬಿಣದ ರಾಡು, ಚಾಕು ಹಾಗೂ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Next Story





