ಉಡುಪಿ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಪರಿಷ್ಕೃತ ಪ್ರಯಾಣ ದರ
ಉಡುಪಿ, ನ.6: ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಅ.13ರಿಂದ ಅನ್ವಯವಾಗುವಂತೆ ಖಾಸಗಿ ಏಕ್ಸ್‌ಪ್ರೆಸ್, ಶಟಲ್ ಹಾಗೂ ಸಿಟಿ ಬಸ್‌ಗಳ ಪ್ರಯಾಣದರವನ್ನು ಪರಿಷ್ಕರಿಸಿ ಪ್ರಕಟಿಸಿದೆ. ಹಾಗೂ ನಿಗದಿಪಡಿಸಿದ ಪರಿಷ್ಕೃತ ದರವನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ.
ಆರ್‌ಟಿಒ ಇಂದು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಪರಿಷ್ಕೃತ ದರದಂತೆ ನಿಗದಿತ ಕನಿಷ್ಠ ದರ ಎಕ್ಸ್‌ಪ್ರೆಸ್ ಹಾಗೂ ಶಟಲ್ ಬಸ್‌ಗಳಿಗೆ 9ರೂ. ಹಾಗೂ ಸಿಟಿ ಬಸ್‌ಗಳಿಗೆ 7ರೂ. ಆಗಿದೆ. ಆದರೆ ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಬಸ್‌ಗಳು ಪಡೆಯುತ್ತಿರುವ ಕನಿಷ್ಠ ದರ ಕ್ರಮವಾಗಿ 20 ಹಾಗೂ 10 ರೂ. ಆಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ದರವನ್ನು ಏರಿಸಿರುವುದಾಗಿ ಬಸ್ ಮಾಲಕರ ಸಂಘಗಳು ಈಗಾಗಲೇ ತಿಳಿಸಿವೆ. ಹೀಗಾಗಿ ಆರ್‌ಟಿಒ ಇಂದು ನಿಗದಿ ಪಡಿಸಿದ ದರಕ್ಕೂ, ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಈಗಾಗಲೇ ಪಡೆಯುತ್ತಿರುವ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದನ್ನು ಪ್ರಾಧಿಕಾರ ಹೇಗೆ ನಿಭಾಯಿಸಲಿದೆ ಎಂದು ನೋಡಬೇಕಿದೆ.
ಉಡುಪಿ ಜಿಲ್ಲೆಯಾದ್ಯಂತ ಕೆಎಸ್ಸಾರ್ಟಿಸಿ ಮತ್ತು ಎಲ್ಲಾ ಖಾಸಗಿ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ಸ್ ಟಿಕೇಟ್ ಮಿಷನ್ನಿನಿಂದಲೇ ಕಡ್ಡಾಯವಾಗಿ ಟಿಕೇಟನ್ನು ಪ್ರಯಾಣಿಕ ರಿಗೆ ವಿತರಿಸಬೇಕು. ತಪ್ಪಿದಲ್ಲಿ ಅಂಥಾ ಬಸ್ಸಿನ ನಿರ್ವಾಹಕರು, ಮಾಲಕರು ಹಾಗೂ ಪರವಾನಿಗೆ ಮೇಲೆ ಕಾನೂನಿನಂತೆ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಟಿಒ ಜೆ.ಪಿ.ಗಂಗಾಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಯಾಣಿಕರು ಸಹ ಎಲೆಕ್ಟ್ರಾನಿಕ್ಸ್ ಟಿಕೇಟ್ ಮಿಷನ್ನಿನಿಂದಲೇ ನೀಡುವ ಟಿಕೇಟ್‌ನ್ನು ಕೇಳಿ ಪಡೆಯಬೇಕು ಎಂದು ಹೇಳಿದ್ದಾರೆ.
ಎಕ್ಸ್‌ಪ್ರೆಸ್, ಸರ್ವಿಸ್ ಮತ್ತು ಸಿಟಿ ಬಸ್‌ಗಳ ಪರಿಷ್ಕೃತ ದರ ಕೆಳಕಂಡಂತಿದೆ








