ಶಿಕ್ಷಕರ ವರ್ಗಾವಣೆ : ತಿದ್ದುಪಡಿಗೆ ಅವಕಾಶ
ಮಂಗಳೂರು, ನ.6: ಪ್ರಸ್ತುತ ಸಾಲಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಶಿಕ್ಷಕರ ಸೇವಾ ವಿವರವನ್ನು ಇಇಡಿಎಸ್ ತಂತ್ರಾಂಶದಲ್ಲಿ ತಿದ್ದುಪಡಿ ಮಾಡುವ ಅವಕಾಶವನ್ನು ಉಪನಿರ್ದೇಶಕರ ಲಾಗಿನ್‌ನಲ್ಲಿ ನೀಡಲಾಗಿದೆ.
ಶಿಕ್ಷಕರು ತಮ್ಮ ಸೇವಾ ವಿವರಗಳನ್ನು ಶಿಕ್ಷಕ ಮಿತ್ರ ಆ್ಯಪ್ ಅಥವಾ ಇಇಡಿಎಸ್ ಶಾಲಾ ಲಾಗಿನ್‌ನಲ್ಲಿ ಖುದ್ದಾಗಿ ಪರಿಶೀಲಿಸಿಕೊಂಡು, ತಿದ್ದುಪಡಿಗಳಿದ್ದಲ್ಲಿ ಆಯಾ ಕೇತ್ರ ಶಿಕ್ಷಣಾಧಿಕಾರಿಗಳಿಗೆ ನ.9ರೊಳಗೆ ಸೂಕ್ತ ದಾಖಲೆಗಳೊಂದಿಗೆ ಮನವಿ ಸಲ್ಲಿಸಬಹುದು.
ಹೆಸರು, ಜನ್ಮ ದಿನಾಂಕ, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ವಿವರ, ವಲಯ, ಹುದ್ದೆಯ ವಿವರ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಲೆಗೆ ವರದಿ ಮಾಡಿಕೊಂಡ ದಿನಾಂಕವನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.
ತಿದ್ದುಪಡಿಗೆ ಇದು ಅಂತಿಮ ಅವಕಾಶವಾಗಿದ್ದು, ಒಂದು ವೇಳೆ ಈ ಸಂದರ್ಭದಲ್ಲಿ ಅಹವಾಲನ್ನು ಸಲ್ಲಿಸದೇ ವರ್ಗಾವಣೆ ಸಮಯದಲ್ಲಿ ಅಹವಾಲನ್ನು ಸಲ್ಲಿಸಿದಲ್ಲಿ ಇಲಾಖೆ ಜವಾಬ್ದಾರವಾಗುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.







