ಗೋವಾ ಬೀಚ್‌ನಲ್ಲಿ ಬೆತ್ತಲೆಯಾಗಿ ಓಡಿದ ಮಿಲಿಂದ್ ಸೋಮನ್ ವಿರುದ್ಧ ಕೇಸ್

ಪಣಜಿ: ಮಾಡೆಲ್-ನಟ ಮಿಲಿಂದ್ ಸೋಮನ್ ವಿರುದ್ಧ ಅಶ್ಲೀಲತೆಯನ್ನು ಉತ್ತೇಜಿಸಿದ ಆರೋಪದ ಮೇಲೆ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೋಮನ್ ಇತ್ತೀಚೆಗೆ ತನ್ನ 55ನೇ ಜನ್ಮದಿನದಂದು ಗೋವಾದ ಕಡಲ ತೀರದಲ್ಲಿ ಬೆತ್ತಲೆಯಾಗಿ ಓಡುತ್ತಿರುವ ಚಿತ್ರವನ್ನು ತಮ್ಮ ಇನ್‌ಸ್ಟಾಗಾಮ್ ಪ್ರೊಫೈಲ್‌ನಲ್ಲಿ ಪೋಸ್ಟ್ ಮಾಡಿದ್ದರು ಎಂದು ಪೊಲೀಸ್‌ಅ ಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಕೀಯ ಸಂಘಟನೆಯಾದ ಗೋವಾ ಸುರಕ್ಷ ಮಂಚ್(ಜಿಎಸ್‌ಎ) ಈ ಕುರಿತು ದೂರು ನೀಡಿದ ಒಂದು ದಿನದ ಬಳಿಕ ಶುಕ್ರವಾರ ಮಿಲಿಂದ್ ಸೋಮನ್ ವಿರುದ್ಧ ಐಪಿಸಿ ಸೆಕ್ಷನ್ 294(ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕಾಯ್ದೆ) ಹಾಗೂ ಮಾಹಿತಿ ಹಾಗೂ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ದಕ್ಷಿಣ ಗೋವಾ)ಪಂಕಜ್ ಕುಮಾರ್ ಸಿಂಗ್ ಹೇಳಿದ್ದಾರೆ.
Next Story





