ಮಿತ್ತಬೈಲ್ : ಮೀಲಾದ್ ಕ್ಯಾಂಪೇನ್, ಸನ್ಮಾನ ಸಮಾರಂಭ

ಬಿ.ಸಿ.ರೋಡ್ , ನ.7: ಮಿತ್ತಬೈಲ್ ವಲಯ ಎಸ್.ವೈ.ಎಸ್. ವತಿಯಿಂದ ಮೀಲಾದ್ ಕ್ಯಾಂಪೇನ್ ಹಾಗೂ ಕಾರ್ಯಕರ್ತರ ಸನ್ಮಾನ ಸಮಾರಂಭ ಶುಕ್ರವಾರ ಮಿತ್ತಬೈಲ್ ಮುಹಿಯುದ್ದೀನ್ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಖತೀಬ್ ಅಶ್ರಫ್ ಫೈಝಿ ಉದ್ಘಾಟಿಸಿದರು. ವಲಯಾಧ್ಯಕ್ಷ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಮುದರ್ರಿಸ್ ಉಮರುಲ್ ಫಾರೂಕ್ ಫೈಝಿ ಮಖ್ಬರ ಝಿಯಾರತ್ ನ ನೇತೃತ್ವ ವಹಿಸಿದ್ದರು. ಬಂಟ್ವಾಳ ವಲಯ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಇರ್ಷಾದ್ ದಾರಿಮಿ ಅಲ್ ಜಝರಿ ದುಆಗೈದರು.
ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸ್ಜಿದ್ ಖತೀಬ್ ಅಶ್ರಫ್ ಫೈಝಿ ಹಾಗೂ ಎಸ್.ವೈ.ಎಸ್. ದ.ಕ. ಜಿಲ್ಲಾ ಪ್ರ. ಕಾರ್ಯದರ್ಶಿ ಕೆ.ಎಲ್.ಉಮರ್ ದಾರಿಮಿ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು.
ಇದೇ ವೇಳೆ ಕಾರ್ಯಕರ್ತರು ಹಾಗೂ ಮುಖಂಡರನ್ನು ಸಾಲು ಹೊದಿಸಿ ಸನ್ಮಾನಿಸಲಾಯಿತು.
ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮುಖ್ಯ ಭಾಷಣ ಮಾಡಿದರು. ರಂತಡ್ಕ ಖತೀಬ್ ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಶುಭ ಹಾರೈಸಿದರು.
ಮಿತ್ತಬೈಲ್ ಮುಹಿಯುದ್ದೀನ್ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಹಮೀದ್ ಹಾಜಿ, ಮಿತ್ತಬೈಲ್ ವಲಯ ಕೋಶಾಧಿಕಾರಿ ಅಬ್ದುಲ್ ಸಲಾಂ, ಉಪಾಧ್ಯಕ್ಷ ಇಬ್ರಾಹೀಂ ಬೋಗೋಡಿ, ಕಾರ್ಯದರ್ಶಿ ಮುಹಮ್ಮದ್ ಶರೀಫ್ ನಂದರಬೆಟ್ಟು, ಎಸ್.ವೈ.ಎಸ್. ನಂದಾವರ ಯುನಿಟ್ ಕಾರ್ಯದರ್ಶಿ ಶರೀಫ್ ಫೈಝಿ ನಂದಾವರ, ಪರ್ಲಿಯ ಖಿದ್ಮತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಹ್ಮದ್ ಬಾವ, ಎಸ್.ವೈ.ಎಸ್. ತುಂಬೆ ಯುನಿಟ್ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಅದ್ದಾದಿ, ಕಾರ್ಯದರ್ಶಿ ಅಬ್ದುಲ್ ಹಮೀದ್ ಪೆರ್ನೆ, ತಾಳಿಪಡ್ಪು ಹಿದಾಯತುಲ್ ಇಸ್ಲಾಂ ಮದ್ರಸ ಅಧ್ಯಕ್ಷ ಸೈಯದ್ ಫಲುಲ್ ತಂಙಳ್, ನಂದಾವರ ಯೂನಿಟ್ ಎಸ್.ವೈ.ಎಸ್. ಅಧ್ಯಕ್ಷ ಎನ್.ಎಚ್.ಮೂಸಾ ಹಾಜಿ, ಹಾಜಿ ಇ.ಕೆ.ಅಹ್ಮದ್ ಫಲುಲ್ ಮುಸ್ಲಿಯಾರ್, ಕೋಟೆಕಣಿ ಟಿ.ಜೆ.ಎಂ. ಅದ್ಯಕ್ಷ ಹನೀಫ್ ಹಾಜಿ, ನಂದರಬೆಟ್ಟು ಮದೀನ ಮಸ್ಜಿದ್ ಹಾಗೂ ಅನ್ಸಾರಿಯ ಇಸ್ಲಾಮಿಕ್ ಮದ್ರಸದ ಅಧ್ಯಕ್ಷ ಅಬ್ದುರ್ರಝಾಕ್, ಎಸ್ಕೆಎಸ್ಸೆಸ್ಸೆಫ್ ಬಿ.ಸಿ.ರೋಡ್ ಶಾಖೆಯ ಅಧ್ಯಕ್ಷ ಮುಹ್ಸಿನ್ ಫೈಝಿ, ಪ್ರಧಾನ ಕಾರ್ಯದರ್ಶಿ ಫಕ್ರುದ್ದೀನ್ ದಾರಿಮಿ, ಕೋಡಿಮಜಲು ಖಿದ್ಮತುಲ್ ಇಸ್ಲಾಂ ಕಮಿಟಿ ಪ್ರಧಾನ ಕಾರ್ಯದರ್ಶಿ ಫಾರೂಕ್, ಸಿದ್ದಿಕ್ ಹಾಜಿ ಡಿ.ಪಿ.ಸ್ಟೋರ್, ಹನೀಫ್ ಕೋಸ್ಟಲ್, ಎನ್.ಎಂ.ಎಸ್.ಅಧ್ಯಕ್ಷ ಅಶ್ರಫ್ ಶಾಂತಿಯಂಗಡಿ, ನಂದರಬೆಟ್ಟು ಮದೀನ ಮಸ್ಜಿದ್ ಹಾಗೂ ಅನ್ಸಾರಿಯ ಇಸ್ಲಾಮಿಕ್ ಮದ್ರಸ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್, ಬಿ.ಸಿ.ರೋಡ್ ಶಾಖಾ ಎಸ್.ವೈ.ಎಸ್. ಕಾರ್ಯದರ್ಶಿ ಇಶಾಕ್ ಅದ್ದೇಡಿ, ಎಸ್.ವೈ.ಎಸ್. ಪರ್ಲಿಯ ಶಾಖೆ ಪ್ರ. ಕಾರ್ಯದರ್ಶಿ ಇಸ್ಮಾಯೀಲ್ ಜವಾನ್, ಕೋಟೆಕಣಿ ಶಾಖೆ ಪ್ರ. ಕಾರ್ಯದರ್ಶಿ ಬಶೀರ್ ಮುಸ್ಲಿಯಾರ್, ರಂತಡ್ಕ ಪ್ರ.ಕಾರ್ಯದರ್ಶಿ ಆಸಿಫ್ ರಂತಡ್ಕ ಮೊದಲಾದ ಗಣ್ಯರು ಉಪಸ್ಥಿತಸರಿದ್ದರು.
ಮಿತ್ತಬೈಲ್ ವಲಯ ಎಸ್.ವೈ.ಎಸ್. ಉಪಾಧ್ಯಕ್ಷ ಅನ್ಸಾರುದ್ದೀನ್ ಫೈಝಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ಸಿದ್ದೀಕ್ ವರಕ್ಕಲ್ ವಂದಿಸಿದರು. ಮುಹಮ್ಮದ್ ಅಲಿ ಅರ್ಶದಿ ಕಿರಾಅತ್ ಪಠಿಸಿದರು. ಇರ್ಫಾನ್ ಮುಸ್ಲಿಯಾರ್ ಕಲಾಯಿ ಕಾರ್ಯಕ್ರಮ ನಿರೂಪಿಸಿದರು.








