ಕೇರಳ ರಾಜ್ಯಪಾಲರಿಗೆ ಕೊರೋನ ಪಾಸಿಟಿವ್

ತಿರುವನಂತಪುರ: ತನಗೆ ಕೊರೋನ ವೈರಸ್ ತಗಲಿರುವುದು ದೃಢಪಟ್ಟಿದ್ದು, ಇದರಿಂದ ಯಾರೂ ಆತಂಕಪಡಬಾರದು ಎಂದು ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಶನಿವಾರ ಟ್ವೀಟಿಸಿದ್ದಾರೆ.
ಕಳೆದ ವಾರದಲ್ಲಿ ಹೊಸದಿಲ್ಲಿಯಲ್ಲಿ ತನ್ನೊಂದಿಗೆ ಸಂಪರ್ಕಕ್ಕೆ ಬಂದವರು ಸ್ವತಃ ಕೊರೋನ ಪರೀಕ್ಷೆಗೆ ಒಳಪಡಬೇಕು ಎಂದು ವಿನಂತಿಸಿದ್ದಾರೆ.
ಭಾರತದಲ್ಲಿ ಶನಿವಾರ ಒಂದೇ ದಿನ 50,357 ಹೊಸ ಕೊರೋನ ವೈರಸ್ ಕೇಸ್ ವರದಿಯಾಗಿದ್ದು, ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 84.62ಲಕ್ಷಕ್ಕೂ ಅಧಿಕವಾಗಿದೆೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
Next Story





