ಕುಂದಾಪುರ: ಭಿಕ್ಷಾಟನೆ ನಿರತ ಶಿರಸಿ, ಹಾವೇರಿ ಮೂಲದ 11 ಮಕ್ಕಳ ರಕ್ಷಣೆ

ಕುಂದಾಪುರ, ನ.7: ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ರಕ್ಷಣಾ ಘಟಕದ ನೇತೃತ್ವದಲ್ಲಿ ಇಂದು ಕುಂದಾಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭಿಕ್ಷಾಟನೆ ನಿರತ 11 ಮಕ್ಕಳನ್ನು ರಕ್ಷಿಸಲಾಗಿದೆ.
ಕುಂದಾಪುರದ ಸಂತೆ ಮಾರ್ಕೆಟ್ ಹಾಗೂ ಬಸ್ ನಿಲ್ದಾಣಗಳಲ್ಲಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಶಿರಸಿ ಮತ್ತು ಹಾವೇರಿ ಮೂಲದ ಬಾಲಕಿಯರು, ಇಬ್ಬರು ಬಾಲಕರು ಸೇರಿದಂತೆ ಒಟ್ಟು 11 ಮಕ್ಕಳನ್ನು ರಕ್ಷಿಸಲಾಗಿದೆ. ಈ ಮಕ್ಕಳನ್ನು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿ ನಿಟ್ಟೂರಿನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ, ಕುಂದಾಪುರ ಪುರಸಭೆ ಪರಿಸರ ಅಭಿಯಂತರ ರಾಘವೇಂದ್ರ, ಪುರಸಭೆ ಅಧಿಕಾರಿಗಳಾದ ಶರತ್, ರಾಘವೇಂದ್ರ ನಾಯ್ಕ್, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಅರುಣ್ ಕುಮಾರ್, ದೇವಾ ಕುಮಾರಿ, ಸುನೀತಾ ಬಾನು, ಶಂಕರ್ ಶೆಟ್ಟಿ, ಕುಂದಾಪುರ ಎಸ್ಸೈ ಸದಾಶಿವ ಗವರೋಜಿ, ಸಿಬ್ಬಂದಿಯಾದ ಪ್ರಸನ್ನ, ಬೇಬಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಹೇಶ್ ದೇವಾಡಿಗ, ಯೋಗೀಶ್, ಸುರಕ್ಷಾ, ಸುನಂದಾ, ಸಂದೇಶ, ಅಂಬಿಕಾ, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕಿ ಪೂರ್ಣಿಮಾ ಬಾನು, ಮಕ್ಕಳ ಸಹಾಯವಾಣಿಯ ವೃಷಕ್, ಪ್ರಮೋದ್, ವಿಶ್ವಾಸದಮನೆ ಸಂಸ್ಥೆಯ ಕ್ರಿಸ್ಟೋಫರ್ ಭಾಗವಹಿಸಿದ್ದರು.







