ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ವತಿಯಿಂದ 21ನೇ ಮನೆ ಹಸ್ತಾಂತರ
![ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ವತಿಯಿಂದ 21ನೇ ಮನೆ ಹಸ್ತಾಂತರ ಮಂಗಳೂರು: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ವತಿಯಿಂದ 21ನೇ ಮನೆ ಹಸ್ತಾಂತರ](https://www.varthabharati.in/sites/default/files/images/articles/2020/11/7/266505-1604764363.jpeg)
ಮಂಗಳೂರು : 'ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಪ್ರಾಜೆಕ್ಟ್ ಆಶಿಯಾನ' ವತಿಯಿಂದ ವರ್ಷಕ್ಕೆ 10 ಮನೆ ನಿರ್ಮಿಸಿಕೊಡುವ ಯೋಜನೆಯಡಿ ಯಲ್ಲಿ ಇಂದು ಕೊಣಾಜೆಯ ನಾಟೆಕಲ್ ನಲ್ಲಿ 21ನೇ ಸುಸಜ್ಜಿತ ಮನೆಯನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಸ್ಜಿದುಲ್ ಏಹ್ಸಾನ್ ಖತೀಬ್ ಮೌಲಾನಾ ತಯ್ಯುಬ್, ಇಮಾಮ್ ಅಲ್ತಾಫ್ ಹುಸೈನ್, ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಅಧ್ಯಕ್ಷರಾದ ಸಜಿದ್ ಎ.ಕೆ., ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.
ರಿಝ್ವಾನ್ ಪಾಂಡೇಶ್ವರ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.