ಐಟಿ ಅಧಿಕಾರಿ ಸೋಗಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ

ಬೆಂಗಳೂರು, ನ.7: ಆದಾಯ ತೆರಿಗೆ ಅಧಿಕಾರಿ ಸೋಗಿನಲ್ಲಿ ವಂಚಿಸಿದ ಆರೋಪದಡಿ ಓರ್ವನನ್ನು ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರದ ವಿಶಾಲ್ ಬಂಧಿತ ನಕಲಿ ಐಟಿ ಅಧಿಕಾರಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಚಿನ್ನದಂಗಡಿಗಳಿಗೆ ಹೋಗಿ ಆದಾಯ ತೆರಿಗೆ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಲಕ್ಷಾಂತರ ರೂ. ಮೌಲ್ಯದ ಆಭರಣವನ್ನ ಖರೀದಿಯ ಬಳಿಕ ಆರ್‍ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡುವುದಾಗಿ ಹೇಳುತ್ತಿದ್ದ. ಹಣ ಪಾವತಿಯಾಗಿರುವ ಜ್ಯುವೆಲ್ಲರಿ ಮಳಿಗೆ ಮಾಲಕರಿಗೆ ನಕಲಿ ಸಂದೇಶ ಕಳುಹಿಸಿ ವಂಚನೆವೆಸಗುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
Next Story





