ಮುರುಡೇಶ್ವರದಲ್ಲಿ ಗ್ರಾಮೋ ಮನಿ ಎಟಿಎಂ ಸೇವೆ ಆರಂಭ
ಭಟ್ಕಳ: ಗ್ರಾಮೋ ಮನಿ ಎ.ಟಿ.ಎಂ. ಸೇವೆಯನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಆರಂಭಿಸಲಾಗಿದ್ದು ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ಮುರ್ಡೇಶ್ವರದಲ್ಲಿ ಗ್ರಾಮೋ ಮನಿ ಎ.ಟಿ.ಎಂ. ಸೇವೆಯನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕಷ್ಟಪಟ್ಟು ದುಡಿದ ಹಣವನ್ನು ಪಡೆಯಲು ಬ್ಯಾಂಕ್‍ನಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ಹಳ್ಳಿಗರಿಗೆ ಗ್ರಾಮೋ ಮನಿ ಎಟಿಎಮ್ ಸದುಪಯೋಗವಾಗಲಿದೆ. ಗ್ರಾಮೋ ಮನಿ ಎಟಿಎಮ್ ಹಳ್ಳಿಗಾಗಿ ಒಂದು ಉತ್ತಮ ಯೋಜನೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿದ್ದು, ಇದರ ಪ್ರಯೋಜನ ಜಿಲ್ಲೆಯ ಜನತೆಗೆ ದೊರೆಯುವಂತಾಗಬೇಕು ಎಂದರು.
ವಿದ್ಯಾವಂತ ನಿರುದ್ಯೋಗಿಗಳಿಗೆ ಇದರಿಂದ ತಾವಿರುವ ಜಾಗದಲ್ಲಿ ಉದ್ಯೋಗ ಸಿಗಲಿಲಿದೆ.ಆದರೆ ಸಂಸ್ಥೆಯು ಪ್ರಾಮಾಣಿಕತೆಯಿಂದ ಹಳ್ಳಿಯಲ್ಲಿ ಇದನ್ನು ನಡೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಇದೆ. ಹಣದ ವ್ಯವಹಾರವಾದ್ದರಿಂದ ಜನರಿಗೆ ಮೋಸ ಆಗದಂತೆ ಅತ್ಯುತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು ಎಂದರು.
ಗ್ರಾಮೋ ಮನಿ ಎಟಿಎಮ್‍ನರಾಜ್ಯ ನಿರ್ದೇಶಕಗುರುಪ್ರಸಾದ ನಾಯಕ್ ಮಾತನಾಡಿ ಇದೊಂದು ಎಟಿಎಮ್ ಅಪ್ಲೀಕೇಶನ್ ಆಗಿದೆ. ನಗರವನ್ನು ನಂಬಿ ಗ್ರಾಮೀಣ ಜನರು ಬರಬೇಕಾಗಿದೆ. ಇದರಿಂದ ಗ್ರಾಮೀಣ ಭಾಗ, ಕುಗ್ರಾಮದಲ್ಲಿ ಇದರ ಸದುಪಯೋಗದಿಂದ ನಗರಕ್ಕೆ ಬರುವುದು ನಿಲ್ಲಲಿದೆ. ಸಂಸ್ಥೆಯು ಆರ್‍ಬಿಐನ ಎನ್‍ಸಿಸಿಐ ಅಡಿಯಲ್ಲಿ ಮಾನ್ಯತೆ ಪಡೆದಿದ್ದು, ಎಲ್ಲಾ ಕಾನೂನು ಬದ್ಧವಾದ ದಾಖಲೆಯೊಂದಿಗೆ ಮನಿ ಎಟಿಎಮ್ ಆರಂಭಿಸಲಾಗಿದೆ ಎಂದರು.
ಗ್ರಾಮೋ ಮನಿ ಎಟಿಎಮ್‍ಜಿಲ್ಲಾಉಸ್ತುವಾರಿಅರುಣಕೋರ್ಲೆ ಮಾತನಾಡಿಕೊರೋನಾದಿಂದ ಸಾಕಷ್ಟು ಸಮಸ್ಯೆ ಎದುರಿಸಿದ ಹಿನ್ನೆಲೆ ಗ್ರಾಮೀಣ ಜನರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಕಾರ್ಯರೂಪಕ್ಕೆತರಲಾಗಿದೆಎಂದರು. ಈ ಸಂದರ್ಭದಲ್ಲಿ ಗರಾಮೋ ಮನಿ ಎಟಿಎಮ್ ನತಂಡದ ಸದಸ್ಯರು, ಸಾರ್ವಜನಿಕರು, ಸಂಸ್ಥಯ ಪ್ರಮುಖರು ಇದ್ದರು.