ಆರ್.ಆರ್.ನಗರ, ಶಿರಾದಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆ: ಸಿ ವೋಟರ್ ಸಮೀಕ್ಷೆ

ಬೆಂಗಳೂರು, ನ.7: ರಾಜ್ಯದ ಆರ್.ಆರ್.ನಗರ ಹಾಗೂ ಶಿರಾ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಶನಿವಾರ ಪ್ರಕಟವಾದ ಸಿ ವೋಟರ್ ಸಮೀಕ್ಷೆ ತಿಳಿಸಿದೆ.
ಭಾರೀ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ಸತತ ಮೂರನೇ ಬಾರಿಗೆ ಆಯ್ಕೆಯಾಗಲಿದ್ದಾರೆಂದು ಸಿ ವೋಟರ್ ತಿಳಿಸಿದೆ. ಮುನಿರತ್ನ ಶೇ.37.8 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಶೇ.30 ಮತಗಳನ್ನು ಪಡೆಯಲಿದ್ದಾರೆಂದು ಸಮೀಕ್ಷೆ ತಿಳಿಸಿದೆ. ಜೆಡಿಎಸ್‌ನ ಕೃಷ್ಣಮೂರ್ತಿ ಶೇ.14 ಮತಗಳನ್ನು ಗಳಿಸಲಿದ್ದಾರೆ.
ಶಿರಾದಲ್ಲೂ ಬಿಜೆಪಿಯ ವಿಜಯದ ಸಾಧ್ಯತೆಗಳು ಅಧಿಕವಾಗಿವೆ ಎಂದು ಸಿ ವೋಟರ್ ತಿಳಿಸಿದೆ. ಬಿಜೆಪಿಯ ರಾಜೇಶ್‌ಗೌಡ ಶೇ.36 ಹಾಗೂ ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಶೇ.32.5 ಹಾಗೂ ಜೆಡಿಎಸ್‌ನ ಅಮ್ಮಾಜಮ್ಮ ಅವರು ಶೇ.17.4 ಮತ ಪಡೆಯಲಿದ್ದಾರೆಂದು ಸಿವೋಟರ್ ಸಮೀಕ್ಷೆ ತಿಳಿಸಿದೆ.
Next Story





