ನಡಾಲ್ ಕ್ವಾರ್ಟರ್ ಫೈನಲ್ಗೆ
ಪ್ಯಾರಿಸ್: ಸ್ಪೇನ್ನ ಸಹ ಆಟಗಾರ ಪಾಬ್ಲೊ ಕರೆನೊ ಬುಸ್ಟಾರನ್ನು 4-6,7-5, 6-1 ಸೆಟ್ಗಳ ಅಂತರದಿಂದ ಮಣಿಸಿದ ರಫೆಲ್ ನಡಾಲ್ ಚೊಚ್ಚಲ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿ ಜಯಿಸುವತ್ತ ಚಿತ್ತವಿರಿಸಿದ್ದಾರೆ.
20 ಬಾರಿಯ ಗ್ರಾನ್ಸ್ಲಾಮ್ ಚಾಂಪಿಯನ್ ನಡಾಲ ಮೊದಲ ಸೆಟ್ ಸೋಲಿನಿಂದ ಬೇಗನೆ ಚೇತರಿಸಿಕೊಂಡರು. ಉಳಿದೆರಡು ಸೆಟ್ಗಳನ್ನು ಗೆದ್ದುಕೊಂಡರು. ನಡಾಲ್ ಮುಂದಿನ ಸುತ್ತಿನಲ್ಲಿ ಜರ್ಮನಿಯ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ರನ್ನು ಎದುರಿಸಲಿದ್ದಾರೆ. ಝ್ವೆರೆವ್ ಸ್ವಿಸ್ ಆಟಗಾರ ಸ್ಟಾನ್ ವಾವ್ರಿಂಕರನ್ನು 6-3, 7-6(1) ಸೆಟ್ಗಳ ಅಂತರದಿಂದ ಮಣಿಸಿದರು.
Next Story