ಮೇಲ್ತೆನೆಯಿಂದ ‘ಮುತ್ತು ನೆಬಿರೆ ಮುತ್ತು ಪಲಕ’ ಕಾರ್ಯಕ್ರಮ

ಮಂಗಳೂರು, ನ.8: ಬ್ಯಾರಿ ಲೇಖಕರು ಮತ್ತು ಕಲಾವಿದರ ಕೂಟ ‘ಮೇಲ್ತೆನೆ’ಯ ವತಿಯಿಂದ ಮೀಲಾದುನ್ನೆಬಿ ಮಾಸಾಚರಣೆಯ ಪ್ರಯುಕ್ತ ‘ಮುತ್ತುನೆಬಿರೆ ಮುತ್ತು ಪಲಕ’ ಕಾರ್ಯಕ್ರಮವು ರವಿವಾರ ದೇರಳಕಟ್ಟೆಯ ಚಿಂತನ ಗ್ರಂಥಾಲಯದಲ್ಲಿ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಮಂಜನಾಡಿ ಅಲ್ ಮದೀನಾ ಮರ್ಝೂಖಿ ಇಕ್ವಾನ್ ಪ್ರಧಾನ ಕಾರ್ಯದರ್ಶಿ ನೌಫಾಲ್ ಮರ್ಝೂಖಿ ಮಲಾರ್ ಮತ್ತು ಮಿತ್ತೂರು ಕೆಜಿಎನ್ ದಅ್ವಾ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಝೈನುದ್ದೀನ್ ಇನೋಳಿ ‘ಪ್ರವಾದಿ ಮುಹಮ್ಮದ್ (ಸ)’ ಅವರ ಬಗ್ಗೆ ಉಪನ್ಯಾಸ ನೀಡಿದರು.
ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಕಾರ್ಯಕ್ರಮ ಉದ್ಘಾಟಿಸಿದರು. ಮೇಲ್ತೆನೆಯ ಅಧ್ಯಕ್ಷ ಇಸ್ಮಾಯೀಲ್ ಟಿ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಹಸನಬ್ಬ ದೇರಳಕಟ್ಟೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ, ಕೋಶಾಧಿಕಾರಿ ಮುಹಮ್ಮದ್ ಬಾಷಾ ನಾಟೆಕಲ್, ಸದಸ್ಯ ರಫೀಕ್ ಕಲ್ಕಟ್ಟ, ಉಪನ್ಯಾಸಕ ಅಝೀಝ್ ಹರೇಕಳ, ಕೆಸಿಎಫ್ ಸಂಘಟನೆಯ ಕಲಂದರ್ ಶಾಫಿ ಅಸೈಗೋಳಿ, ಮುಹಮ್ಮದ್ ಕೈಸರ್, ಮುಹಮ್ಮದ್ ನಶಾತ್ ಪಾಲ್ಗೊಂಡಿದ್ದರು.
ಹಂಝ ಮಲಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶೀರುದ್ದೀನ್ ಆಲಿಯಾ ಮಂಜನಾಡಿ ಸ್ವಾಗತಿಸಿದರು. ಖಲೀಲ್ ಕಲ್ಲಾಪು ವಂದಿಸಿದರು. ರಿಯಾಝ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.







