ಬಿಷಪ್ ಹೌಸ್‌ನಲ್ಲಿ ಕ್ರೈಸ್ತ ಮುಖಂಡರಿಗೆ ಸನ್ಮಾನ

ಮಂಗಳೂರು, ನ. 8: ಮಂಗಳೂರು ಧರ್ಮಪ್ರಾಂತದ ನೂತನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನೇಮಕಗೊಂಡ ರಾಯ್ (ರೊನಾಲ್ಡ್) ಕ್ಯಾಸ್ತೆಲಿನೊ, ಕರ್ನಾಟಕ ಸರಕಾರದ ಯೋಜನಾ ಆಯೋಗದ ಸದಸ್ಯರಾಗಿ ಆಯ್ಕೆಯಾದ ಮಾರ್ಸೆಲ್ ಮೊಂತೇರೊ ಹಾಗೂ ಗೇರುಬೀಜ ಉತ್ಪಾದಕರ ಸಂಘಟನೆಯ ನೂತನ ಅಧ್ಯಕ್ಷ ಸಂತೋಷ್ ಡಿಸಿಲ್ವಾ ನಿಟ್ಟೆ ಅವರನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಶನಿವಾರ ಸನ್ಮಾನಿಸಲಾಯಿತು.
ಈ ಸಂದಭ ಕ್ರೈಸ್ತ ಸಮಾಜದ ಮುಖಂಡರಾದ ಗಿಲ್ಬರ್ಟ್ ಡಿಸೋಜ, ಇ. ಫೆರ್ನಾಂಡಿಸ್, ಡಾ. ಎರೊಲ್ ಪಿಂಟೊ, ಪ್ರೊ.ಎಡ್ಮಂಡ್ ಫ್ರಾಂಕ್, ರಿಚರ್ಡ್ ರಾಡ್ರಿಗಸ್, ರಾಲ್ಫಿ ಡಿಕೋಸ್ತ, ಲೂವಿಸ್. ಜೆ. ಪಿಂಟೊ, ಡಾ. ಡೆರಿಕ್ ಲೋಬೊ, ಎಲಿಯಾಸ್ ಸಾಂಕ್ತಿಸ್, ವಿಕ್ಟರ್ ಮಥಾಯಸ್, ರೋಹನ್ ಮೊಂತೇರೊ, ರೊನಾಲ್ಡ್ ಗೋಮ್ಸ್, ಅನಿಲ್ ಲೋಬೊ, ಸ್ಟ್ಯಾನಿ ಆಲ್ವಾರಿಸ್, ಕ್ಯಾಪ್ಟನ್ ಜಾನ್ ಪ್ರಸಾದ್ ಮಿನೇಜಸ್, ಕ್ಯಾಪ್ಟನ್ ವಿನ್ಸೆಂಟ್ ಪಾಯ್ಸ್, ಲಾರೆನ್ಸ್ ಡಿಸೋಜ, ಆಲಿಸ್ಟರ್ ಉಪಸ್ಥಿತರಿದ್ದರು.
....
Next Story





