ವಿದ್ಯಾಪೋಷಕ್ ವಿದ್ಯಾರ್ಥಿನಿಯರಿಗೆ ನೂತನ ಮನೆ ಹಸ್ತಾಂತರ

ಉಡುಪಿ, ನ.8: ಯಕ್ಷಗಾನ ಕಲಾರಂಗದ ವತಿಯಿಂದ ಬಿದ್ಕಲ್‌ಕಟ್ಟೆಯಲ್ಲಿ ವಿದ್ಯಾಪೋಷಕ್ ವಿದ್ಯಾರ್ಥಿನಿ ಕಾವ್ಯ ಎಚ್.ಆರ್(ದ್ವಿತೀಯ ಬಿಇ) ಮತ್ತು ರಮ್ಯಾ ಎಚ್. ಆರ್.(ದ್ವಿತೀಯ ಪಿಯುಸಿ) ಅವರಿಗೆ ನಿರ್ಮಿಸಿಕೊಟ್ಟ ಮನೆಯ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಕಾರ್ಯ ಕ್ರಮವನ್ನು ಉದ್ಘಾಟಿಸಿದರು. ದುಬೈಯಲ್ಲಿ ಉದ್ಯೋಗಿಯಾಗಿರುವ ಮರ್ಣೆ ಉಮೇಶ್ ಭಟ್ ಐದು ಲಕ್ಷ ವೆಚ್ಚದ ಈ ಮನೆಯ ಪ್ರಾಯೋಜಕತ್ವ ವಹಿಸಿ ದ್ದಾರೆ. ಕಾರ್ಯಕ್ರಮದಲ್ಲಿ ಉಮೇಶ್ ಭಟ್ ಅವರ ಧರ್ಮಪತ್ನಿ ಭಾರತಿ ಭಟ್, ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಕೆ.ಗಣೇಶ್ ರಾವ್, ಉಪಾಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಕೆ.ಮನೋಹರ್, ಜತೆ ಕಾರ್ಯದರ್ಶಿಯ ರಾದ ನಾರಾಯಣ ಎಂ.ಹೆಗಡೆ, ಎಚ್.ಎನ್.ಶಂಗೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಇದು ಸಂಸ್ಥೆ ನಿರ್ಮಿಸಿ ಕೊಡುತ್ತಿರುವ 18ನೆ ಮನೆಯಾಗಿದೆ.
Next Story





