ಮಜೂರು: ಜ್ಞಾನವಿಕಾಸ ಮಾಹಿತಿ ಕಾರ್ಯಕ್ರಮ

ಶಿರ್ವ, ನ.8: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಇದರ ವತಿಯಿಂದ ಜ್ಞಾನ ವಿಕಾಸ ಮಾಹಿತಿ ಕಾರ್ಯಕ್ರಮವನ್ನು ಇತ್ತೀಚೆಗೆ ಮಜೂರು(ಚಂದ್ರನಗರ) ಜ್ಞಾನವಿಕಾಸ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.
ಕೇಂದ್ರ ಕಚೇರಿಯ ಮಾನವ ಸಂಪನ್ಮೂಲ ವಿಭಾಗದ ಮಮತಾ ಹರೀಶ್ ರಾವ್ ಕಾರ್ಯಕ್ರಮ ಉದ್ಘಾಟಿಸಿ, ಸಾಂಕೇತಿಕವಾಗಿ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಿಸಿದರು. ಜಿಲ್ಲೆಯ ಹಿರಿಯ ನಿರ್ದೇಶಕ ಗಣೇಶ್ ಬಿ. ಮೈಕೊ್ರೀ ಬಚತ್ ಪಾಲಿಸಿಯನ್ನು ವಿತರಿಸಿದರು.
ಮಾಶಾಸನ ಮಂಜೂರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿ ರೋಹಿತ್ ಎಚ್. ವಿತರಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ತರಬೇತಿ ಕೇಂದ್ರದ ಪ್ರಾಂಶುಪಾಲ ಅಶೋಕ್ ಕೆ., ಮಜೂರು ಒಕ್ಕೂಟದ ಉಪಾಧ್ಯಕ್ಷೆ ಉಷಾ, ಸಭಾಭವನದ ವಾಲಕಿ ಶ್ವೇತಾ ಭಟ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಮಜೂರು ಗ್ರಾಪಂ ಮಾಜಿ ಅಧ್ಯಕ್ಷ ಸಂದೀಪ್ ರಾವ್ ವಹಿಸಿದ್ದರು. ಒಕ್ಕೂಟದ ಪದಾಧಿಕಾರಿ ಕಿಶೋರ್ ಆಚಾರ್ಯ, ಸಂತೋಷ್ ಆಚಾರ್ಯ ಮೊದಲಾದವರು ಹಾಜರಿದ್ದರು. ಒಕ್ಕೂಟದ ಸೇವಾ ಪ್ರತಿನಿಧಿ ರಜನಿ ಸ್ವಾಗತಿಸಿದರು. ಜ್ಞಾನ ವಿಕಾಸದ ಸಮನ್ವಯ ಅಧಿಕಾರಿ ಜ್ಯೋತಿ ನಿರೂಪಿಸಿದರು.