ತಲಪಾಡಿ: ಹುಬ್ಬರ್ರಸೂಲ್ ಕಾನ್ಫರೆನ್ಸ್

ಕೆ.ಸಿ.ರೋಡ್, ನ.8: ಸುನ್ನೀ ಕೋ ಓರ್ಡಿನೇಶನ್ ಕಮಿಟಿ ತಲಪಾಡಿ ರೇಂಜ್ ಹಾಗೂ ಎಸ್‌ಜೆಯು, ಎಸ್‌ಜೆಎಂ, ಎಸ್‌ಎಂಎ, ಎಸ್‌ವೈಎಸ್, ಎಸ್ಸೆಸ್ಸೆಫ್ ಇದರ ಜಂಟಿ ಆಶ್ರಯದಲ್ಲಿ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಕಾರ್ಯಕ್ರಮ ರವಿವಾರ ಹಿದಾಯತ್ ನಗರದ ಅಲ್ ಹಿದಾಯ ಜುಮಾ ಮಸ್ಜಿದ್‌ನಲ್ಲಿ ಜರುಗಿತು.
ಸೈಯದ್ ಅಲವಿ ತಂಙಳ್ ಕಿನ್ಯ ಮೌಲಿದ್ ಮಜ್ಲಿಸ್‌ನ ನೇತೃತ್ವ ವಹಿಸಿದ್ದರು. ಡಾ.ಎಮ್ಮೆಸ್ಸೆಎಂ ಅಬ್ದುರ್ರಶೀದ್ ಝೈನಿ ಖಾಮಿಲಿ ತಲಪಾಡಿ ಪ್ರವಾದಿ ಜೀವನ ಸಂದೇಶ ನೀಡಿದರು. ಕೆ.ಪಿ ಹುಸೈನ್ ಸಅದಿ ಕೆಸಿ ರೋಡ್ ಹುಬ್ಬುರ್ರಸೂಲ್ ಭಾಷಣ ಮಾಡಿದರು.
ವೇದಿಕೆಯಲ್ಲಿ ಮುನೀರ್ ಸಖಾಫಿ, ಕೆ.ಸಿ.ರೋಡ್ ಮಸೀದಿಯ ಅಧ್ಯಕ್ಷ ಮೊಯಿದೀನ್ ಕುಟ್ಟಿ, ಅಬ್ಬಾಸ್ ಹಾಜಿ ಕೆ.ಸಿ.ರೋಡ್, ಖಾದರ್ ಹಾಜಿ ಕೆ.ಸಿ.ನಗರ, ಅಶ್ರಫ್ ಸಅದಿ ಕೆ.ಸಿ.ನಗರ. ಜಾಬಿರ್ ಫಾಲಿಲ್ ತಲಪಾಡಿ, ಅಬ್ದುಲ್ ಅಝೀಝ್ ಸಖಾಫಿ ಹಿದಾಯತ್ ನಗರ ಉಪಸ್ಥಿತರಿದ್ದರು.
Next Story





