ಹಂಪಿ ಉತ್ಸವಕ್ಕೆ 30 ಲಕ್ಷ ರೂ.ವೆಚ್ಚ: ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ಬಳ್ಳಾರಿ, ನ. 8: ಹಂಪಿ ಉತ್ಸವವನ್ನು ಮೂರು ದಿನ ನಡೆಸದಿದ್ದರೆ ಮುಂದೂಡಬೇಕು. ಇಲ್ಲವೇ ರದ್ದುಗೊಳಿಸಬೇಕು ಎಂಬ ವಿರೋಧಗಳ ನಡುವೆಯೂ ಒಂದು ದಿನದ ಹಂಪಿ ಉತ್ಸವವನ್ನು ನ.13ರಂದು ಹಮ್ಮಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದ್ದು, ಅದಕ್ಕಾಗಿ 30 ಲಕ್ಷ ವೆಚ್ಚದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿ ಕಾಯುತ್ತಿದೆ.
ವೇದಿಕೆ ಕಾರ್ಯಕ್ರಮಗಳನ್ನು ಈ ಬಾರಿ ರದ್ದುಪಡಿಸಲಾಗಿದೆ. ಉತ್ಸವಕ್ಕೆ ಇನ್ನು ಐದು ದಿನ ಮಾತ್ರ ಬಾಕಿ ಉಳಿದಿದ್ದು, ಇನ್ನೂ ಸರಕಾರದಿಂದ ಅನುದಾನ ಬಿಡುಗಡೆ ಆಗಿಲ್ಲ. ಈ ಮಧ್ಯೆ ಒಂದೇ ದಿನ ಹಂಪಿ ಉತ್ಸವ ನಡೆಸುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಕೊರೋನ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಉತ್ಸವವನ್ನು ನಡೆಸದೇ ಇರುವುದು ಸರಿಯಲ್ಲ ಎಂಬ ಕಾರಣಕ್ಕೆ ಆಯೋಜಿಸಲಾಗುತ್ತಿದೆ. ಅನುದಾನ ಶೀಘ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ.
Next Story





