Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ9 Nov 2020 12:10 AM IST
share
ಓ ಮೆಣಸೇ...

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಉಳಿಸುವ ಜವಾಬ್ದಾರಿ ಮತದಾರರ ಮೇಲಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಅಪ್ಪ-ಮಕ್ಕಳಿಂದ ಪ್ರಾದೇಶಿಕ ಪಕ್ಷವನ್ನು ಉಳಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎನ್ನುವುದು ನಿಜ.


ದ್ವೇಷ ಭಾಷಣಗಳು, ವೈಯಕ್ತಿಕ ಟೀಕೆಗಳ ಮೂಲಕ ಚುನಾವಣೆ ಗೆಲ್ಲುವುದು ಆರೋಗ್ಯಪೂರ್ಣ ಪ್ರಜಾಸತ್ತೆಗೆ ಒಳ್ಳೆಯದಲ್ಲ - ರಾಜನಾಥ್ ಸಿಂಗ್, ಕೇಂದ್ರ ಸಚಿವ
ಸದ್ಯಕ್ಕೆ ದೇಶದಲ್ಲಿ ಅಸ್ತಿತ್ವದಲ್ಲಿರುವುದು ಅನಾರೋಗ್ಯಪೂರ್ಣ ಸರಕಾರ ಎಂದು ಒಪ್ಪಿಕೊಳ್ಳುತ್ತೀರಾ?


ರೆಸಾರ್ಟ್ ರಾಜಕಾರಣ ಈಗ ಒಂದರ್ಥದಲ್ಲಿ ನಾಡಿನ ಸಂಸ್ಕೃತಿಯೇ ಆಗಿಬಿಟ್ಟಿದೆ - ಶಿವರಾಮ ಹೆಬ್ಬಾರ್, ಸಚಿವ
ನಾಡಿನ ಸಂಸ್ಕೃತಿಯಲ್ಲ, ರಾಜಕಾರಣಿಗಳ ಸಂಸ್ಕೃತಿಯನ್ನು ಅದು ಹೇಳುತ್ತದೆ.


ನೆನಪು ಮತ್ತು ಕನಸು ಇರುವ ಭಾಷೆ ಮಾತ್ರ ಉತ್ತುಂಗ ಸ್ಥಾನ ತಲುಪಿ ಅಜರಾಮರವಾಗುತ್ತದೆ - ಡಾ.ಚಂದ್ರಶೇಖರ್ ಕಂಬಾರ, ಸಾಹಿತಿ
ಹಿಂದಿ ದಾಳಿ ಹೀಗೆ ಮುಂದುವರಿದರೆ ಕನ್ನಡ ನೆನಪು ಮತ್ತು ಕನಸಲ್ಲಷ್ಟೇ ಉಳಿಯುತ್ತದೆ.


ನಾನು ಕೂಡಾ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ - ತನ್ವೀರ್ ಸೇಠ್, ಶಾಸಕ
ಮುಸ್ಲಿಮರು ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷೆ ಪಡುವುದು ದೇಶದ್ರೋಹ.


ಭಾರತದಲ್ಲಿ ಜಾತ್ಯತೀತತೆ ಅಪಾಯದಲ್ಲಿದೆ - ಶಶಿ ತರೂರು, ಕಾಂಗ್ರೆಸ್ ಮುಖಂಡ
ಅದು ನಮಗೂ ಗೊತ್ತಿದೆ. ಅಪಾಯವನ್ನು ಎದುರಿಸಲು ಏನು ಕಾರ್ಯಕ್ರಮಗಳನ್ನು ಕೈಗೊಂಡಿದ್ದೀರಿ , ಅದನ್ನು ಹೇಳಿ.


ಕಾಂಗ್ರೆಸ್‌ನವರು ಕಾಲಕ್ಕೆ ಅನುಸಾರ ಬಣ್ಣ ಬದಲಿಸುವ ಊಸರವಳ್ಳಿ ಗುಣದವರು - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಹಾಗೆಂದು ಇನ್ನೂ ಮನುವಾದಿ ಕಾಲದಲ್ಲೇ ಇರುವುದು ಸರಿಯೇ?


ಇದು ಇವ ನಮ್ಮವ, ಇವ ನಮ್ಮವ ಎಂದ ನೆಲ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಎನ್‌ಆರ್‌ಸಿ ಬೇರೆಯೇ ಹೇಳುತ್ತದೆಯಲ್ಲ?


ನೀರು ಕೇಳಿದರೆ ಹಾಲು ಕೊಡುವ ಸಂಸ್ಕೃತಿ ನಮ್ಮದು - ಕಲ್ಲಡ್ಕ ಪ್ರಭಾಕರ ಭಟ್ಟ, ಆರೆಸ್ಸೆಸ್ ಮುಖಂಡ
ಹಾಲು ಕಂಡಲ್ಲಿ ಹುಳಿ ಹಿಂಡುವ ಸಂಸ್ಕೃತಿ ತಮ್ಮದು ಎಂಬುದು ಜನರ ಅಭಿಪ್ರಾಯ.


ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬದಲು ರಾಜಕೀಯ ನಿವೃತ್ತಿ ಪಡೆಯುವೆ - ಮಾಯಾವತಿ, ಬಿಎಸ್‌ಪಿ ನಾಯಕಿ
ನೀವು ಇನ್ನೂ ನಿವೃತ್ತಿ ಪಡೆದಿಲ್ಲವೆ? ರಾಜಕೀಯದಲ್ಲೇ ಇದ್ದೀರಾ?


ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬಂದ ಬಳಿಕ ಕ್ರೀಡೆಯೂ ಪಠ್ಯಕ್ರಮದ ಭಾಗವಾಗಲಿದೆ - ಸಿ.ಟಿ.ರವಿ, ಸಚಿವ
ಮಟ್ಕಾ ದಂಧೆಯ ಬಗ್ಗೆ ಹೇಳುತ್ತಿಲ್ಲ ತಾನೆ?


ಕಾಂಗ್ರೆಸ್ ಮುಖಂಡ ಕಮಲ್‌ನಾಥ್ ನನ್ನನ್ನು ನಾಯಿ ಎಂದು ಕರೆದಿರುವುದು ನಿಂದನೆಯಲ್ಲ, ಅದು ಹೊಗಳಿಕೆ -ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿ ಮುಖಂಡ
ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎಂದರೆ ನಿಂದನೆಯಾಗುತ್ತದೆಯೇ?


ಬಿಹಾರದಲ್ಲಿ ಜಂಗಲ್‌ರಾಜ್ ತಂದವರಿಗೆ ‘ಭಾರತ್ ಮಾತಾಕಿ ಜೈ’, ‘ಜೈ ಶ್ರೀರಾಮ್’ ಹೇಳುವುದು ಇಷ್ಟವಾಗುವುದಿಲ್ಲ -ನರೇಂದ್ರ ಮೋದಿ, ಪ್ರಧಾನಿ
ಭಾರತದಲ್ಲಿ ಜಂಗಲ್‌ರಾಜ್ ತಂದವರಿಗೆ ಇಷ್ಟ ಎನ್ನುವುದು ಗೊತ್ತು.


ದೇಶಾದ್ಯಂತ ‘ಲವ್ ಜಿಹಾದ್’ ಹೆಸರಿನಲ್ಲಿ ದೊಡ್ಡಮಟ್ಟದ ಮತಾಂತರ ನಡೆಯುತ್ತಿದೆ - ಶೋಭಾ ಕರಂದ್ಲಾಜೆ, ಸಂಸದೆ
ಯಾವುದೋ ಸಚಿವೆಯನ್ನು ಇನ್ನಾವುದೋ ಮುಖ್ಯಮಂತ್ರಿ ಲವ್ ಮಾಡಿ ಗುಟ್ಟಾಗಿ ಮದುವೆ ಯಾಗಿರುವುದು ಜಿಹಾದ್ ವ್ಯಾಪ್ತಿಗೆ ಬರುತ್ತದೆಯೇ?


ವಿದ್ಯುನ್ಮಾನ ಮತಯಂತ್ರಗಳು ಪ್ರಧಾನಿ ಮೋದಿಯ ‘ಮತ ಯಂತ್ರ’ವಾಗಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಯುಪಿಎ ಸರಕಾರವಿದ್ದಾಗ ತಾನೆ, ಈ ಮತಯಂತ್ರ ಹುಟ್ಟಿದ್ದು?


ದೇಶದ ಆರ್ಥಿಕತೆ ನಿರೀಕ್ಷಿಸಿದ್ದಕ್ಕಿಂತಲೂ ವೇಗವಾಗಿ ಹಳಿಗೆ ಮರುಳುತ್ತಿದೆ -ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ
ಹಳ್ಳಕ್ಕೆ ಹೊರಳುತ್ತಿದೆ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ.


ರಾಜ್ಯದಲ್ಲಿ ತಕ್ಷಣಕ್ಕೆ ಶಾಲೆ ಆರಂಭ ಇಲ್ಲ - ಸುರೇಶ್‌ಕುಮಾರ್, ಸಚಿವ
ಶಾಲೆಗಳನ್ನೆಲ್ಲ ಗೋಶಾಲೆಗಳಾಗಿ ಪರಿವರ್ತಿಸುವ ಉದ್ದೇಶವಿದ್ದಂತಿದೆ.


ಅರ್ನಬ್ ಗೋಸ್ವಾಮಿ ಬಂಧನ ತುರ್ತುಪರಿಸ್ಥಿತಿಯನ್ನು ನೆನಪಿಸುತ್ತಿದೆ - ಅಮಿತ್ ಶಾ, ಕೇಂದ್ರ ಸಚಿವ
ಜನರಿಗೆ ನೋಟುನಿಷೇಧ, ಲಾಕ್‌ಡೌನ್ ಸಂದರ್ಭದಲ್ಲಿಯೇ ತುರ್ತು ಪರಿಸ್ಥಿತಿ ನೆನಪಾಗಿದೆ.


ನಾನು ಬಿದ್ದು, ಎದ್ದು, ಗೆದ್ದು ಬರುವೆ - ವಿನಯ ಕುಲಕರ್ಣಿ, ಮಾಜಿ ಸಚಿವ
ಬಹುಶಃ ಮೋದಿಯ ಕಾಲಿಗೆ ಬಿದ್ದು ಗೆಲ್ಲುವ ಉದ್ದೇಶವಿರಬಹುದೆಯೇ?


ವಿದ್ಯಾರ್ಥಿಗಳಿಗೆ ವೈ-ಫೈ ಮೂಲಕ ಆನ್‌ಲೈನ್ ಶಿಕ್ಷಣ ನೀಡಲು ಲ್ಯಾಪ್‌ಟಾಪ್ ನೀಡುವ ಚಿಂತನೆ ಇದೆ - ಶ್ರೀರಾಮುಲು, ಸಚಿವ
ಬರೇ ಚಿಂತೆಯಲ್ಲೇ ಒಂದು ವರ್ಷ ಮುಗಿಯಿತು.


ಅನುಷ್ಠಾನದ ಬಗ್ಗೆ ಮಾತನಾಡಿ. ಪಾಶ್ಚಿಮಾತ್ಯರು ಹಿಂದೂ ಧರ್ಮವನ್ನು ವಿರೂಪಗೊಳಿಸಿದರು - ಮೋಹನ್ ಭಾಗವತ್, ಆರೆಸ್ಸೆಸ್ ಮುಖಂಡ
ಹೌದು, ದಲಿತರು, ಶೂದ್ರರಿಗೆ ಶಿಕ್ಷಣ ನೀಡುವ ಮೂಲಕ.


ಈ ವಿಧಾನಸಭೆ ಚುನಾವಣೆಯೇ ನನ್ನ ಕೊನೆಯ ಚುನಾವಣೆ - ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ
ಬಿಜೆಪಿಯ ಸಂಗ ನಿಮ್ಮನ್ನು ಈ ಸ್ಥಿತಿಗೆ ತಲುಪಿಸಿತು ನೋಡಿ.


ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಬಿಜೆಪಿಗೆ ಸೇರಿಸುವ ಪ್ರಶ್ನೆಯೇ ಇಲ್ಲ - ಕೆ.ಎಸ್.ಈಶ್ವರಪ್ಪ, ಸಚಿವ
ಕೊಲೆ ಆರೋಪವಿರುವುದು ಬಿಜೆಪಿಗೆ ಸೇರುವುದಕ್ಕಿರುವ ಒಂದು ಪ್ರಮುಖ ಅರ್ಹತೆಯಲ್ಲವೇ?


ತಂತ್ರಜ್ಞಾನ ಮತ್ತು ಅಧ್ಯಾತ್ಮವನ್ನು ಬೇರೆಬೇರೆಯಾಗಿ ನೋಡಬಾರದು - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಅಧ್ಯಾತ್ಮವನ್ನು ತಂತ್ರಜ್ಞಾನ ಬಳಸಿಯೇ ಮಾರಾಟ ಮಾಡುತ್ತಿರುವ ಕಾರಣಕ್ಕಾಗಿ.

share
ಪಿ.ಎ.ರೈ
ಪಿ.ಎ.ರೈ
Next Story
X