ವಿನಯ ಕುಲಕರ್ಣಿ ಆರೋಪಿ ಅಷ್ಟೇ, ಅಪರಾಧಿ ಅಲ್ಲ: ಸಿದ್ದರಾಮಶ್ರೀ
ಗದಗ, ನ. 8: ಜಿಪಂ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಆರೋಪಿ ಅಷ್ಟೇ, ಅಪರಾಧಿ ಅಲ್ಲ. ಅಧಿಕಾರಿಗಳು ನ್ಯಾಯಯುತ ತನಿಖೆ ನಡೆಸುವ ಆಶಾಭಾವನೆ ಇದೆ ಎಂದು ಗದಗದ ತೋಂಟದಾರ್ಯ ಮಠದ ಪೀಠಾಧ್ಯಕ್ಷ ಸಿದ್ದರಾಮಶ್ರೀ ಹೇಳಿದ್ದಾರೆ.
ರವಿವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೀಶಗೌಡ ಹತ್ಯೆ ಪ್ರಕರಣದ ತನಿಖೆಗೆ ಯಾರ ಹಸ್ತಕ್ಷೇಪವೂ ಇಲ್ಲ. ವಿನಯ ಕುಲಕರ್ಣಿ ಅವರನ್ನು ಬಂಧಿಸಿರುವುದು ರಾಜಕೀಯ ಪ್ರೇರಿತ ಎಂದು ಹೇಳಲಾಗುತ್ತಿದೆ. ನಿಷ್ಪಕ್ಷಪಾತ ತನಿಖೆ ನಡೆದು ಅವರು ನಿರಪರಾಧಿಯಾಗಿ ಹೊರ ಬರಲಿ ಎಂದು ಹೇಳಿದರು.
ತಾನು ನಿರಪರಾಧಿ, ತನ್ನದೇನೂ ಪಾತ್ರ ಇಲ್ಲ. ರಾಜ್ಯದ ಪೊಲೀಸರೂ ಯಾವುದೇ ಆರೋಪ ಹೊರಿಸಿಲ್ಲ ಎಂದು ನನ್ನ ಬಳಿ ಬಂದಾಗ ತಿಳಿಸಿದ್ದರು ಎಂದು ಸ್ವಾಮೀಜಿ ಅವರು ತಿಳಿಸಿದರು.
Next Story





