ಮಲ್ಪೆ ಬೀಚ್‌ನ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಮಲ್ಪೆ, ನ.9: ಮಲ್ಪೆ ಬೀಚ್‌ನ ಸಮುದ್ರದಲ್ಲಿ ಮುಳುಗುತ್ತಿದ್ದ ಯುವತಿ ಸೇರಿ ದಂತೆ ಇಬ್ಬರು ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಇಂದು ಮಧ್ಯಾಹ್ನ 12.30ರ ಸುಮಾರಿಗೆ ನಡೆದಿದೆ.
ನೀರಿನಲ್ಲಿ ಮುಳುಗಿ ಅಸ್ವಸ್ಥರಾದ ನೆಲಮಂಗಲದ ರಮ್ಯ ಹಾಗೂ ದೊಡ್ಡ ಬಳ್ಳಾಪುರದ ಸುಹಾನ್ ಎಂಬವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಮ್ಯ ತನ್ನ ಕುಟುಂಬದ ಜೊತೆಗೆ ಮಲ್ಪೆ ಬೀಚ್‌ಗೆ ವಿಹಾರಕ್ಕೆಂದು ಬಂದಿ ದ್ದರು. ಅಲ್ಲಿ ನೀರಿನಲ್ಲಿ ಆಡುತ್ತಿದ್ದಾಗ ರಮ್ಯ ಅಲೆಗಳ ಅಬ್ಬರಕ್ಕೆ ನೀರಿನಲ್ಲಿ ಕೊಚ್ಚಿ ಕೊಂಡು ಹೋದರೆನ್ನಲಾಗಿದೆ. ಇದನ್ನು ನೋಡಿದ ಅಲ್ಲೇ ಇದ್ದ ಸುಹಾನ್ ಎಂಬಾತ ರಕ್ಷಣೆಗಾಗಿ ಸಮುದ್ರಕ್ಕೆ ದುಮುಕಿದ ಎನ್ನಲಾಗಿದೆ. ಆದರೆ ಅಲೆಗಳ ಅಬ್ಬರಕ್ಕೆ ಸಿಲುಕಿದ ಸುಹಾನ್ ಕೂಡ ನೀರಿನಲ್ಲಿ ಮುಳುಗಿದ ಎಂದು ತಿಳಿದುಬಂದಿದೆ. ಕೂಡಲೇ ಇದನ್ನು ಗಮನಿಸಿದ ಬೀಚ್‌ನ ಟೂರಿಸ್ಟ್ ಬೋಟಿನವರು ಇಬ್ಬರನ್ನು ರಕ್ಷಿಸಿ ತೀರಕ್ಕೆ ತಂದರು. ತೀವ್ರವಾಗಿ ಅಸ್ವಸ್ಥಗೊಂಡ ಇವರಿಬ್ಬರು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.





