ಹಾಡಹಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಯುವತಿಯ ಕೊಲೆ
ಮೈಸೂರು, ನ.9: ಇಲ್ಲಿಗೆ ಸಮೀಪದ ಪಿರಿಯಾಪಟ್ಟಣ ತಾಲೂಕಿನಲ್ಲಿ ಬೆಂಕಿ ಹಚ್ಚಿ ಯುವತಿಯೊಬ್ಬಳನ್ನು ಕೊಲೆ ಮಾಡಲಾದ ಪೈಶಾಚಿಕ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಪಿರಿಯಾಪಟ್ಟಣದಿಂದ 20 ಕಿ.ಮೀ. ದೂರದ ರಾವಂದೂರಿನ ಬಳಿಯ ಕಲ್ಲೂರು ಎಂಬಲ್ಲಿ ರವಿವಾರ ಬೆಳಗ್ಗೆ 7 ಘಂಟೆಯ ಸುಮಾರಿಗೆ ರಸ್ತೆ ಬದಿಯಲ್ಲೇ ಅಪರಿಚಿತ ಯುವತಿಯೊಬ್ಬಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ.
ಮೃತ ಯುವತಿಗೆ 16 ರಿಂದ 18 ವರ್ಷ ಪ್ರಾಯ ಇರಬಹುದೆಂದು ಪೋಲೀಸರು ಅಂದಾಜಿಸಿದ್ದು, ಸ್ಥಳಕ್ಕೆ ಜಿಲ್ಲಾ ಎಸ್‌ಪಿ ಸಿ.ಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲಿಸಿದರು.
ಪಿರಿಯಾಪಟ್ಟಣ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story