ಅಂಬಾಗಿಲು ಮಣಿಪಾಲ ಚತುಷ್ಪಥ ರಸ್ತೆ ಕಾಮಗಾರಿಗೆ ಚಾಲನೆ

ಉಡುಪಿ, ನ. 9: ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಂಬಾಗಿಲು ಪೆರಂಪಳ್ಳಿ ಮಣಿಪಾಲ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 7.32 ಎಕ್ರೆ ಖಾಸಗಿ ಜಾಗ ವನ್ನು ಟಿಡಿಆರ್ ಮಾದರಿಯಲ್ಲಿ ಸ್ವಾಧೀನ ಪಡಿಸಲಾಗುತ್ತಿದೆ. ಮೂರು ಗುತ್ತಿಗೆದಾರ ರಿಗೆ ಕಾಮಗಾರಿ ವಹಿಸಿಕೊಡಲಾಗಿದ್ದು, ಮೇ ತಿಂಗಳ ಅಂತ್ಯದೊ ಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಉಡುಪಿ ಶಾಸಕ ಕೆ.ರಘುಪತಿಭಟ್ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ 16ಕೋ.ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಅಂಬಾಗಿಲು-ಪೆರಂಪಳ್ಳಿ-ಮಣಿಪಾಲ ಚತುಷ್ಪಥ ರಸ್ತೆ ಕಾಮ ಗಾರಿಗೆ ಸೋಮವಾರ ಪೆರಂಪಳ್ಳಿ ರೈಲ್ವೆ ಸೇತುವೆ ಬಳಿ ಗುದ್ದಲಿ ಪೂಜೆ ನೇರವೇರಿಸಿ ಅವರು ಮಾತನಾಡುತಿದ್ದರು.
ಬ್ರಹ್ಮಾವರ -ಹೆಬ್ರಿ ಚತುಷ್ಪಥ ರಸ್ತೆ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡ ಗಾಲು ಹಾಕುತ್ತಿದೆ. ಈಗಾಗಲೇ 1.26 ಕೋ.ರೂ. ಇಲಾಖೆಗೆ ನೀಡಿ ದ್ದರೂ ಮರಗಳನ್ನು ತೆರವುಗೊಳಿಸಲು ಅವಕಾಶ ನೀಡುತ್ತಿಲ್ಲ ಎಂದ ಅವರು, ಶೀಂಬ್ರಾ ಸೇತುವೆ, ಪೆರಂಪಳ್ಳಿ, ರಾಮಕಟ್ಟೆ, ಸಗ್ರಿಯಿಂದ ಇಂದ್ರಾಳಿ ಜಂಕ್ಷನ್ ಸಂಪರ್ಕಿ ಸುವ ರಸ್ತೆಗೆ ಲೋಕೊಪಯೋಗಿ ಇಲಾಖೆಯಿಂದ 5 ಕೋ.ರೂ. ಹಾಗೂ ಎಸ್‌ಟಿ ಅನುದಾನದಿಂದ 1 ಕೋ.ರೂ. ಮಂಜೂರು ಆಗಿದೆ. ಅಂಬಾಗಿಲು -ನಿಟ್ಟೂರು ಶಾಲೆ ಸಮೀಪದ ತಂಗದಂಗಡಿಯವರೆಗೆ ರಸ್ತೆಗೆ 2 ಕೋ.ರೂ. ಬಿಡುಗಡೆಯಾಗಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ್ ಬಾಬು, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರಿಧರ್ ಕರಂಬಳ್ಳಿ, ಭಾರತಿ ಪ್ರಶಾಂತ್, ಸೆಲಿನಾ ಕರ್ಕಡ, ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ., ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಭಟ್ ಉಪಸ್ಥಿತರಿದ್ದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಸ್ವಾಗತಿಸಿದರು. ನಗರಸಭಾ ಸದಸ್ಯ ಗಿರೀಶ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.







