ಭವಿಷ್ಯದಲ್ಲಿ ಅಬ್ದುಲ್ ಸಮದ್ ವಿಶೇಷ ಆಟಗಾರನಾಗಬಹುದು: ಯುವರಾಜ್ ಸಿಂಗ್

ಅಬುಧಾಬಿ: ಸನ್ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್ ಮನ್ ಅಬ್ದುಲ್ ಸಮದ್ ಭವಿಷ್ಯದಲ್ಲಿ ವಿಶೇಷ ಆಟಗಾರನಾಗಿ ಹೊರಹೊಮ್ಮಬಹುದು ಎಂದು ಭಾರತದ ಮಾಜಿ ಅಲ್ ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
19ರ ಹರೆಯದ ಸಮದ್ ಐಪಿಎಲ್ ನಲ್ಲಿ ಆಡುತ್ತಿರುವ ಜಮ್ಮು-ಕಾಶ್ಮೀರದ ಮೂರನೆ ಆಟಗಾರನಾಗಿದ್ದಾರೆ. ರವಿವಾರ ನಡೆದ ಐಪಿಎಲ್ ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ 16 ಎಸೆತಗಳಲ್ಲಿ 33 ರನ್ ಗಳಿಸಿದ್ದಾರೆ. ಆದರೆ ಹೈದರಾಬಾದ್ 17ರನ್ ನಿಂದ ಸೋತಿತ್ತು. ಆದಾಗ್ಯೂ ಸಮದ್ ಅವರ ಈ ಪ್ರದರ್ಶನದಿಂದ ಯುವರಾಜ್ ಹಾಗೂ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರಭಾವಿತರಾಗಿದ್ದಾರೆ.
“ಭವಿಷ್ಯದಲ್ಲಿ ಸಮದ್ ಸ್ಪೆಷಲ್ ಆಟಗಾರನಾಗಬಹುದು.ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಅವರು ಸಾಕಷ್ಟು ಭರವಸೆ ಮೂಡಿಸಿದ್ದಾರೆ’’ ಎಂದು ಯುವಿ ಹೇಳಿದ್ದಾರೆ.
“ಸಮದ್ ಹೈದರಾಬಾದ್ ತಂಡಕ್ಕೆ ಗೆಲುವು ತಂದುಕೊಡಬೇಕಿತ್ತು.ಅವರ ಪ್ರದರ್ಶನವು ನನಗೆ ನಿಜಕ್ಕೂ ಹೆಮ್ಮೆ ತಂದಿದೆ’’ ಎಂದು ಪಠಾಣ್ ಹೇಳಿದ್ದಾರೆ.
Next Story





