ಕೇರಳ ಮೂಲದ ಉದ್ಯಮಿ ಹತ್ಯೆ ಪ್ರಕರಣ : ಇಬ್ಬರು ಆರೋಪಿಗಳು ವಶ

ಮಂಗಳೂರು, ನ.9: ಕೇರಳ ಮೂಲದ ಉದ್ಯಮಿ, ಕಾವೂರು ಮಲ್ಲಿ ಲೇಔಟ್‌ನ ಸುರೇಂದ್ರನ್ (60) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಥಳೀಯ ನಿವಾಸಿಗಳಾದ ಸಂತೋಷ್ ಮತ್ತು ಸಿದ್ದು ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಮೂಲತಃ ಕೇರಳದವರಾದ ಸುರೇಂದ್ರನ್ ಅವರು ಹಲವು ವರ್ಷಗಳಿಂದ ಕಾವೂರು ಮಲ್ಲಿ ಲೇಔಟ್‌ನಲ್ಲಿ ಪತ್ನಿ ಜತೆ ವಾಸಿಸುತ್ತಿದ್ದರು. ಅ.3ರಂದು ಸುರೇಂದ್ರನ್ ಅವರ ಕೊಲೆಗೈಯಲಾಗಿತ್ತು. ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ದಂತೆ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





