ಕಾಪು ಕರಂದಾಡಿಯಲ್ಲಿ ನ.10ರಂದು ಸಮಗ್ರ ಕೃಷಿ ಮಾಹಿತಿ
ಉಡುಪಿ, ನ.9: ಜಿಲ್ಲಾ ಕೃಷಿಕ ಸಂಘದ ಕಾಪು ವಲಯ ಸಮಿತಿಯ ಆಯೋಜನೆಯಲ್ಲಿ ಸಮಗ್ರ ಕೃಷಿ ಮಾಹಿತಿ ಕಾರ್ಯಕ್ರಮ ನ.10ರ ಮಂಗಳವಾರ ಸಂಜೆ 4:30ಕ್ಕೆ ಕಾಪು ಕರಂದಾಡಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ.
ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಉಳಿಯಾರಗೋಳಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕ ಗುರುರಾಜ ಭಟ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಲ್ಲೈಸಿಯ ನಿವೃತ್ತ ಅಧಿಕಾರಿ ಗೋಪಾಲ ಎಂ. ಕುಂದರ್ ಭಾಗವಹಿಸಲಿದ್ದಾರೆ.
ಮಾಹಿತಿದಾರರಾಗಿ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಹಾಗೂ ಕಾಪು ವಲಯ ಸಮಿತಿಯ ವೇಣುಗೋಪಾಲ ಎಂ. ಭಾಗವಹಿಸಲಿದ್ದಾರೆ ಎಂದು ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.
Next Story





