ಕದಿಕೆ ಕಡಲ ಕಿನಾರೆಯಲ್ಲಿ ಅಲೆಯಿಂದ ವಿದ್ಯುತ್ ಉತ್ಪಾದನಾ ಸಂಶೋಧನಾ ಘಟಕ ಸ್ಥಾಪನೆ: ವಿಜಯ ಕುಮಾರ್ ಹೆಗ್ಡೆ

ಉಡುಪಿ, ನ.9: ಐದು ವರ್ಷಗಳ ಹಿಂದೆ ಪ್ರಾಯೋಗಿಕವಾಗಿ ನಡೆಸಿ ಯಶಸ್ವಿಯಾಗಿರುವ ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಸುಸಿ ಗ್ಲೋಬಲ್ ರಿಸರ್ಚ್ ಸೆಂಟರಿನ ಯೋಜನೆಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನಾ ಮತ್ತು ಸಂಶೋಧನಾ ಘಟಕವನ್ನು ಕೆಮ್ಮಣ್ಣು ಗ್ರಾಪಂ ವ್ಯಾಪ್ತಿಯ ಕದಿಕೆ ಸಮುದ್ರ ಕಿನಾರೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಂಶೋಧಕ ವಿಜಯ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸುಸಿ ಗ್ಲೋಬಲ್ ರಿಸರ್ಚ್ ಸೆಂಟರ್‌ನ ಈ ಯೋಜನೆಗೆ ಬೆಂಗಳೂರಿನ ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್ಸಿ ಟ್ಯೂಟ್ ಕೈಜೋಡಿಸಿದೆ. 2015ರಲ್ಲಿ ಪ್ರಾಯೋಗಿಕ ಯೋಜನೆ ನಡೆಸಲಾಗಿದ್ದು, ಆ ಬಳಿಕ ತಾಂತ್ರಿಕವಾಗಿ ಸಂಶೋಧನೆಗಳನ್ನು ಮಾಡಿ ಮತ್ತಷ್ಟು ಅಭಿವೃದ್ಧಿ ಪಡಿಸಿ ಇದೀಗ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸ ಲಾಗುತ್ತಿದೆ ಎಂದರು.
ಈಗಾಗಲೇ ಈ ಯೋಜನೆಗೆ 3.5ಕೋಟಿ ರೂ. ವ್ಯಯ ಮಾಡಲಾಗಿದ್ದು, 100 ಕಿಲೋ ವ್ಯಾಟ್ ಉತ್ಪಾದಿಸುವ ಈ ಯೋಜನೆ ಶೀಘ್ರವೇ ಅನುಷ್ಠಾನ ಗೊಳ್ಳಲಿದೆ. ಎರಡು ತಿಂಗಳ ಕಾಲ ಈ ಬಗ್ಗೆ ಸಂಶೋಧನೆ ನಡೆಸಿ, ಜನವರಿಯಲ್ಲಿ ಪೂರ್ಣಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಕಾರ್ಯ ಆರಂಭಿಸಲಾಗು ವುದು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಟೈಡಲ್ ಪವರ್ ಬಗ್ಗೆ ಎಲ್ಲ ರೀತಿಯ ತಾಂತ್ರಿಕ ಮಾಹಿತಿಯನ್ನು ನೀಡ ಲಾಗಿದೆ. ಇದಕ್ಕೆ ಅವರು ಪೂರ್ಣಪ್ರಮಾಣದಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮುಂದೆ ಈ ವಿದ್ಯುತ್ ಸಂಶೋಧನಾ ಕೇಂದ್ರವು ಜಗತ್ತಿ ನಲ್ಲಿಯೇ ಅತ್ಯಂತ ದೊಡ್ಡ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಸಂಶೋಧನಾ ಕೇಂದ್ರ ಆಗಲಿದೆ ಎಂದು ಅವರು ತಿಳಿಸಿದರು.
ಘಟಕ ಸ್ಥಾಪಿಸಲಾಗುವ ಕದಿಕೆ ಸಮುದ್ರ ಕಿನಾರೆಯಲ್ಲಿ ನ.10ರಂದು ಬೆಳಗ್ಗೆ 9:30ಕ್ಕೆ ಸ್ವಚ್ಛ ಭಾರತ ಹಾಗೂ ಪ್ರವಾಸಿ ಕೇಂದ್ರ ಅಭಿವೃದ್ದಿ ಯೋಜನೆಯಡಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಈಸ್ಟ್ ವೆಸ್ಟ್ ಗ್ರೂಪ್ ಮತ್ತು ಜಿಪಂ ಸ್ವಚ್ಛ ಭಾರತ್ ಮಿಷನ್ ಸಹಯೋಗದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಈಸ್ಟ್ ವೆಸ್ಟ್ ಗ್ರೂಪ್‌ನ ಪ್ರೊ.ನಾರಾಯಣ ಟಿ.ಶಾನು ಭಾಗ್, ಮೋಹಕ್‌ರಾಜ್ ಉಪಸ್ಥಿತರಿದ್ದರು.







