ಇಬ್ಬರು ಮನೆಗಳ್ಳರ ಬಂಧನ: 75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮೈಸೂರು,ನ.9: ನಗರದ ಅಶೋಕ ರಸ್ತೆಯಲ್ಲಿರುವ ಜ್ಯುವೆಲರಿ ಅಂಗಡಿ ಬಳಿ ಮನೆಗಳಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಲಿಂಗರಾಜು ಅಲಿಯಾಸ್ ಸೈಯದ್ ಶಾಹೀದ್ (38) ಹಾಗೂ ಸೈಯದ್ ನವಾಬ್ ಅಲಿಯಾಸ್ ನವಾಬ್ (40) ಎನ್ನಲಾಗಿದೆ. ಇವರಿಂದ 75 ಲಕ್ಷ ಮೌಲ್ಯದ 1 ಕೆ.ಜಿ. 439 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರಸ್ವತಿಪುರಂ, ಬನ್ನಿಮಂಟಪದ ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
Next Story





