ಬೈಡನ್‌ರ ಕೊರೋನ ನಿಗ್ರಹ ತಂಡದ ಮುಖ್ಯಸ್ಥರಾಗಿ ವಿವೇಕ್ ಮೂರ್ತಿ

ವಾಶಿಂಗ್ಟನ್, ನ. 9: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ಗೆ ಕೊರೋನ ವೈರಸ್ ವಿಷಯದಲ್ಲಿ ಸಲಹೆ ನೀಡುವ ಕೋವಿಡ್-19 ಸಲಹಾ ಮಂಡಳಿಯ ಸಹ ಅಧ್ಯಕ್ಷರಾಗಿ ಸೋಮವಾರ ಭಾರತೀಯ ಅಮೆರಿಕನ್ ಡಾ.ವಿವೇಕ್ ಮೂರ್ತಿಯನ್ನು ನೇಮಿಸಲಾಗಿದೆ. ಅವರು ಮೂವರು ಸಹ ಅಧ್ಯಕ್ಷರ ಪೈಕಿ ಒಬ್ಬರಾಗಿರುತ್ತಾರೆ.
ಅಮೆರಿಕದ ಮಾಜಿ ಸರ್ಜನ್ ಜನರಲ್ ಆಗಿರುವ ಡಾ. ಮೂರ್ತಿ ಹಾಗೂ ಇತರ ಇಬ್ಬರು ಸಹ ಅಧ್ಯಕ್ಷರು ಬೈಡನ್ ಮತ್ತು ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಸಲಹೆ ನೀಡುವ ಸಾರ್ವಜನಿಕ ಆರೋಗ್ಯ ಪರಿಣತರ ತಂಡದ ನೇತೃತ್ವ ವಹಿಸುವರು.
‘‘ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧ ಸೆಣಸುವುದು ನಮ್ಮ ಸರಕಾರ ನಡೆಸಲಿರುವ ಅತ್ಯಂತ ಮಹತ್ವದ ಹೋರಾಟಗಳಲ್ಲಿ ಒಂದಾಗಿದೆ’’ ಎಂದು ಬೈಡನ್ ಹೇಳಿದರು.
Next Story





