5 ಕೋಟಿ ದಾಟಿದ ಜಾಗತಿಕ ಕೊರೋನ ಪ್ರಕರಣಗಳ ಸಂಖ್ಯೆ

ಪ್ಯಾರಿಸ್ (ಫ್ರಾನ್ಸ್), ನ. 9: ಜಾಗತಿಕ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ರವಿವಾರ 5 ಕೋಟಿಯನ್ನು ದಾಟಿದೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ಸಂಗ್ರಹಿಸಿರುವ ಅಂಕಿಸಂಖ್ಯೆಗಳು ತಿಳಿಸಿವೆ.
ಸುಮಾರು 30 ದಿನಗಳ ಹಿಂದೆ ಆರಂಭವಾಗಿರುವ ಕೊರೋನ ವೈರಸ್ ಎರಡನೇ ಅಲೆಯು, ಈ ಪೈಕಿ ಸುಮಾರು ಕಾಲು ಭಾಗದಷ್ಟು ಮಂದಿಗೆ ಸೋಂಕು ಹರಡಿದೆ.
ಅಕ್ಟೋಬರ್ ತಿಂಗಳಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯು ಹದಗೆಟ್ಟಿದ್ದು, ಅಮೆರಿಕದಲ್ಲಿ ಪ್ರತಿ ದಿನ ಒಂದು ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಯುರೋಪ್‌ನಲ್ಲೂ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಈವರೆಗೆ ಕೊರೋನ ವೈರಸ್‌ಗೆ 12.5 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.
ಯುರೋಪ್‌ನಲ್ಲಿ 1.2 ಕೋಟಿ ಸೋಂಕು ಪ್ರಕರಣಗಳು ವರದಿಯಾಗಿದ್ದು, ಅದು ಲ್ಯಾಟಿನ್ ಅಮೆರಿಕವನ್ನು ಹಿಂದಕ್ಕೆ ಹಾಕಿದೆ. ಒಟ್ಟು ಜಾಗತಿಕ ಸಾವಿನ 24 ಶೇಕಡ ಯುರೋಪ್‌ನಲ್ಲಿ ಸಂಭವಿಸಿದೆ.
Next Story





