ಪೊಲಿಪು ಮಿಸ್ಕಿನ್ ಎಂಪವರ್ಮೆಂಟ್ ಫೌಂಡೇಶನ್ : ಅಧ್ಯಕ್ಷರಾಗಿ ಇಮ್ತಿಯಾಝ್ ಅಹ್ಮದ್
ಕಾಪು : ಮಿಸ್ಕಿನ್ ಎಂಪವರ್ಮೆಂಟ್ ಫೌಂಡೇಶನ್ ಎಂಎಸ್ ಪೊಲಿಪು, ಕಾಪು ಮಹಾಸಭೆ ರವಿವಾರ ನಡೆಯಿತು.
ಸಂಘಟನೆ ಸಲಹೆಗಾರ ಅಮೀರ್ ಹಂಝ ಕಾಪು ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಮಸೀದಿಯ ಖತೀಬ್ ಮಹಮ್ಮದ್ ಇರ್ಷಾದ್ ಸಹದಿ ದುವಾ ಮಾಡುವ ಮೂಲಕ ಉದ್ಘಾಟಿಸಿದರು. ಶಾರೂಕ್ ಕಾಪು ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ನಝೀರ್ ಕಲ್ಲಾಪು ಲೆಕ್ಕಪತ್ರ ಮಂಡಿಸಿದರು. ಬಳಿಕ ನಡೆದ ಸಭೆಯಲ್ಲಿ ಮುಂದಿನ 2020-21 ರ ಸಾಲಿನ ನೂತನ ಸಮಿತಿ ರಚಿಸಲಾಯಿತು.
ಇಮ್ತಿಯಾಝ್ ಅಹ್ಮದ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಫಯಾಝ್, ಪ್ರಧಾನ ಕಾರ್ಯದರ್ಶಿ ನಝೀರ್ ಹಸನ್ ಕಲ್ಲಾಪು, ಜೊತೆ ಕಾರ್ಯದರ್ಶಿ ಮಹಮ್ಮದ್ ಆರಿಫ್ ಮತ್ತು ಇಲ್ಯಾಸ್, ಕೋಶಾಧಿಕಾರಿ ಶೇಖ್ ನಝೀರ್, ಸಲಹೆಗಾರರು ಅಮೀರ್ ಹಂಝ ಕಾಪು ಮತ್ತು ಶೇಖ್ ಅಲ್ತಾಫ್, ವಾಲೆಂಟರ್ ಇನ್ ಚಾರ್ಜ್ ಆಗಿ ಮಹಮ್ಮದ್ ಮೆಹ್ಸೂಲ್ ಅಮೀರ್ ಮತ್ತು ಶೇಖ್ ತಲಾಲ್ ಅವರನ್ನು ಆಯ್ಕೆ ಮಾಡಲಾಯಿತು. ಮಹಮ್ಮದ್ ಆರೀಫ್ ವಂದಿಸಿದರು.
Next Story