ನಾವು ದಣಿದಿರಬಹುದು, ವೈರಸ್ ದಣಿದಿಲ್ಲ: ಡಬ್ಲ್ಯುಎಚ್‌ಒ ಮುಖ್ಯಸ್ಥ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 10: ಕೊರೋನ ವೈರಸ್ ವಿರುದ್ಧದ ಹೋರಾಟವನ್ನು ಮುಂದುವರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಸೋಮವಾರ ಜನರಿಗೆ ಕರೆ ನೀಡಿದ್ದಾರೆ. ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ನಾವು ದಣಿದಿರಬಹುದು, ಆದರೆ ನಮ್ಮ ವಿರುದ್ಧದ ಹೋರಾಟದಲ್ಲಿ ವೈರಸ್ ದಣಿದಿಲ್ಲ ಎಂದು ಅವರು ಹೇಳಿದ್ದಾರೆ.
ಜನರು ವಿಜ್ಞಾನವನ್ನು ಅನುಸರಿಸಬೇಕಾಗಿರುವುದು ಹಾಗೂ ವೈರಸ್ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳದಿರುವುದು ಅಗತ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ ಮಾತನಾಡುತ್ತಾ ಅವರು ಹೇಳಿದರು. ಮೇ ತಿಂಗಳಲ್ಲಿ ಅರ್ಧದಲ್ಲೇ ನಿಲ್ಲಿಸಲಾಗಿದ್ದ ಅಧಿವೇಶನವನ್ನು ಸೋಮವಾರ ಪುನರಾರಂಭಿಸಲಾಗಿದೆ.
Next Story





