ಫ್ಲೋರಿಡ: ಕಾರಲ್ಲಿ ಬಂದವರಿಂದ ಜನರ ಗುಂಪಿನತ್ತ ಗುಂಡು
ಓರ್ವ ಸಾವು; 7 ಮಂದಿಗೆ ಗಾಯ

ಟ್ಯಾಲಹ್ಯಾಸಿ (ಅಮೆರಿಕ), ನ. 11: ಅಮೆರಿಕದ ಫ್ಲೋರಿಡ ರಾಜ್ಯದ ಟಾಂಪ ಎಂಬಲ್ಲಿ ಮಂಗಳವಾರ ರಾತ್ರಿ ಕಾರೊಂದರಲ್ಲಿ ಬಂದ ಬಂದೂಕುಧಾರಿಗಳು ಬಾಸ್ಕೆಟ್ಬಾಲ್ ಅಂಗಣವೊಂದರತ್ತ ಗುಂಡು ಹಾರಿಸಿದಾಗ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಬಣ್ಣದ ಗಾಜು ಹೊಂದಿದ ಕಾರೊಂದರಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಕಾರಿನಲ್ಲಿ ಸಾಗುತ್ತಿರುವಂತೆಯೇ, ಬಾಸ್ಕೆಟ್ಬಾಲ್ ಅಂಗಣದ ಸಮೀಪ ನೆರೆದಿದ್ದ ಜನರ ಮೇಲೆ ಗುಂಡು ಹಾರಿಸಿತು.
ಓರ್ವ ವ್ಯಕ್ತಿ ಆಸ್ಪತ್ರೆ ತಲುಪಿದ ಬಳಿಕ ಕೊನೆಯುಸಿರೆಳೆದರು ಹಾಗೂ ಇಬ್ಬರ ಸ್ಥಿತಿ ಗಂಭೀರವಾಗಿದೆ. ಇತರ ಐದು ಮಂದಿಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story