ಮೊದಲ ಬಾರಿ ಆರ್ಥಿಕ ಹಿಂಜರಿತ ಪ್ರವೇಶಿಸಿದ ಭಾರತ; ಶೇ 8.6ರಷ್ಟು ಕುಸಿಯಲಿರುವ ಜಿಡಿಪಿ: ಆರ್ಬಿಐ ಅಧಿಕಾರಿ
ಮುಂಬೈ: ಜುಲೈ-ಸೆಪ್ಟೆಂಬರ್ ಅವಧಿಗೆ ದೇಶದ ಜಿಡಿಪಿ ಶೇ 8.6ರಷ್ಟು ಕುಸಿತ ಕಾಣಲಿದ್ದು, ಕೋವಿಡ್ ಸಾಂಕ್ರಾಮಿಕದಿಂದ ಸತತ ಎರಡು ತ್ರೈಮಾಸಿಕ ಋಣಾತ್ಮಕ ಪ್ರಗತಿ ದಾಖಲಿಸಿರುವ ಭಾರತವು ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ಆರ್ಥಿಕ ವರ್ಷದ ಪ್ರಥಮಾರ್ಧ ಅವಧಿಯಲ್ಲಿ ಆರ್ಥಿಕ ಹಿಂಜರಿತ ಪ್ರವೇಶಿಸಲಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ರಿಸರ್ವ್ ಬ್ಯಾಂಕ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಸಕ್ತ ಸಂಪೂರ್ಣ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ ಶೇ 9.5ರಷ್ಟು ಕುಸಿತ ಕಾಣಲಿದೆ ಎಂದು ಆರ್ಬಿಐ ಅಂದಾಜಿಸಿದೆ.
"ಭಾರತವು 2020-21ರ ಪ್ರಥಮಾರ್ಧದಲ್ಲಿ ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತಾಂತ್ರಿಕ ಆರ್ಥಿಕ ಹಿಂಜರಿತಕ್ಕೆ ಪ್ರವೇಶಿಸಿದೆ ಹಾಗೂ ಈ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಎರಡನೇ ಬಾರಿ ಸತತ ಜಿಡಿಪಿ ಕುಸಿತ ಕಾಣಲಿದೆ,'' ಎಂದು ಆರ್ಬಿಐನ ಆರ್ಥಿಕ ನೀತಿ ವಿಭಾಗದ ಪಂಕಜ್ ಕುಮಾರ್ ಅವರು ಬರೆದಿರುವ 'ಇಕನಾಮಿಕ್ ಆಕ್ಟಿವಿಟಿ ಇಂಡೆಕ್ಸ್' ಲೇಖನದಲ್ಲಿ ವಿವರಿಸಲಾಗಿದೆ.
ಅಧಿಕೃತ ಜಿಡಿಪಿ ಅಂಕಿಅಂಶಗಳನ್ನು ಆರ್ಬಿಐ ಈ ತಿಂಗಳಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.