ಚೀನಾದ ರಕ್ಷಣಾ ಕಂಪೆನಿಗಳಲ್ಲಿ ಅಮೆರಿಕನ್ನರ ಹೂಡಿಕೆ ನಿಷೇಧಿಸಿದ ಟ್ರಂಪ್

ವಾಶಿಂಗ್ಟನ್, ನ. 13: ಚೀನಾದ ಸೇನೆ ಮತ್ತು ಭದ್ರತಾ ವ್ಯವಸ್ಥೆಗಳಿಗೆ ಸಲಕರಣೆಗಳನ್ನು ಪೂರೈಸುವ ಚೀನಾದ ಕಂಪೆನಿಗಳಲ್ಲಿ ಅಮೆರಿಕನ್ನರು ಹೂಡಿಕೆ ಮಾಡುವುದನ್ನು ನಿಷೇಧಿಸುವ ಸರಕಾರಿ ಆದೇಶವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಸಹಿ ಹಾಕಿದ್ದಾರೆ. ಆದೇಶದಲ್ಲಿ ಚೀನಾದ 31 ಕಂಪೆನಿಗಳನ್ನು ಹೆಸರಿಸಲಾಗಿದೆ.
ಚೀನಾವು ಅಮೆರಿಕದ ಬಂಡವಾಳವನ್ನು ಸೇನಾ ಮತ್ತು ಗುಪ್ತಚರ ಸೇವೆಗಳಿಗೆ ನಿಧಿಯಾಗಿ ಬಳಸುತ್ತಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಸಮೂಹ ನಾಶಕ ಅಸ್ತ್ರಗಳ ಅಭಿವೃದ್ಧಿ ಮತ್ತು ನಿಯೋಜನೆಗಾಗಿ ಈ ಹಣವನ್ನು ಖರ್ಚು ಮಾಡಲಾಗುತ್ತಿದೆ ಎಂದು ಅದು ಆರೋಪಿಸಿದೆ.
ಟ್ರಂಪ್ ತನ್ನ ‘ಅಮೆರಿಕ ಮೊದಲು’ ಘೋಷಣೆಯನ್ವಯ, ಚೀನಾವನ್ನು ಅಮೆರಿಕ ಮತ್ತು ಜಾಗತಿಕ ಪ್ರಜಾಸತ್ತೆಗೆ ಬಹು ದೊಡ್ಡ ಬೆದರಿಕೆ ಎಂಬುದಾಗಿ ಬಿಂಬಿಸಿದ್ದಾರೆ. ಚೀನಾದೊಂದಿಗೆ ವ್ಯಾಪಾರ ಸಮರವನ್ನು ಆರಂಭಿಸಿರುವ ಅವರು, ಚೀನಾದ ತಂತ್ರಜ್ಞಾನ ಕಂಪೆನಿಗಳಿಗೆ ಹೊಡೆತ ನೀಡಿದ್ದಾರೆ.
Next Story





