92 ಮಂದಿ ಕೃಷಿ ಅಧಿಕಾರಿಗಳು ನಿರ್ದೇಶಕರ ಹುದ್ದೆಗೆ ನಿಯುಕ್ತಿ
ಬೆಂಗಳೂರು, ನ. 13: ಕೃಷಿ ಇಲಾಖೆ ಸೇವೆಗೆ ಸೇರಿದ ಒಟ್ಟು 92 ಮಂದಿ ಕೃಷಿ ಅಧಿಕಾರಿಗಳ ವೇತನ ಶ್ರೇ ಣಿಯನ್ನು 52,650 ರೂ.ಗಳಿಂದ 97,100 ರೂ.ಗಳಿಗೆ ಹೆಚ್ಚಳ ಮಾಡಿ ಸಹಾಯಕ ಕೃಷಿ ನಿರ್ದೇಶಕರ ಹುದ್ದೆಗೇರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದ ವರೆಗೆ ನಾಗರೀಕ ಸೇವಾ ನಿಯಮಗಳು-1958ರ ನಿಯಮ 32ರಡಿ ಷರತ್ತು ಬದ್ಧವಾಗಿ ಸ್ವತಂತ್ರ ಪ್ರಭಾರದಲ್ಲಿರಿಸಿ ಅವರ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ರೂಪಾ ಜೆ.ಮಾಡ- ಸಹಾಯಕ ಕೃಷಿ ನಿರ್ದೇಶಕಿ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ, ಎಂ.ಪಿ.ರಾಜಲಕ್ಷ್ಮಿ-ಸಹಾಯಕ ಕೃಷಿ ನಿರ್ದೇಶಕಿ ಜಂಟಿ ಕೃಷಿ ನಿರ್ದೇಶಕರ ಕಚೇರಿ ಹಾಸನ ಜಿಲ್ಲೆ, ಮಮತಾ ಎಸ್.ಬಿ.-ಸಹಾಯಕ ಕೃಷಿ ನಿರ್ದೇಶಕಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ನಾಗನಹಳ್ಳಿ ಮೈಸೂರು, ಸುಧಾ ಎಚ್.ಎಸ್.- ಸಹಾಯಕ ಕೃಷಿ ನಿರ್ದೇಶಕಿ ಜಂಟಿ ಕೃಷಿ ನಿರ್ದೇಶಕರ ಕಚೇರಿ ಚಾಮರಾಜನಗರ ಜಿಲ್ಲೆ, ಅನಿತಾ- ಸಹಾಯಕ ಕೃಷಿ ನಿರ್ದೇಶಕಿ, ಕೃಷಿ ನಿರ್ದೇಶಕಿ ಜಂಟಿ ಕೃಷಿ ನಿರ್ದೇಶಕರ ಕಚೇರಿ ರಾಮನಗರ ಸೇರಿದಂತೆ ಒಟ್ಟು 92 ಮಂದಿಯನ್ನು ಸ್ಥಳ ನಿಯುಕ್ತಿಗೊಳಿಸಿ ಕೃಷಿ ಇಲಾಖೆ ಅಧೀನ ಕಾರ್ಯದರ್ಶಿ ಜೋನ್ ಪ್ರಕಾಶ್ ರೋಡ್ರಿಗಸ್ ಆದೇಶ ಹೊರಡಿಸಿದ್ದಾರೆ.





