ಅಸ್ಸಾಂ ಆಸ್ಪತ್ರೆಗೆ ವೈದ್ಯಕೀಯ ಉಪಕರಣ ಕೊಡುಗೆ ನೀಡಿದ ಸಚಿನ್ ತೆಂಡುಲ್ಕರ್

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರು ಅಸ್ಸಾಮಿನ ಚಾರಿಟೇಬಲ್ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳನ್ನು ಕೊಡುಗೆ ನೀಡಿದ್ದು, ಇದರಿಂದ ಬಡ ಕುಟುಂಬದ 2,000 ಮಕ್ಕಳು ಲಾಭ ಪಡೆಯಲಿದ್ದಾರೆ.
ಯುನಿಸೆಫ್‌ನ ಸದ್ಬಾವನಾ ರಾಯಭಾರಿಯಾಗಿರುವ ತೆಂಡುಲ್ಕರ್ ಅಸ್ಸಾಮಿನ ಕರಿಂಗಂಜ್ ಜಿಲ್ಲೆಯಲ್ಲಿರುವ ಮಕುಂದ ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕ ಹಾಗೂ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ಅಗತ್ಯವಿರುವ ಉಪಕರಣಗಳನ್ನು ದೇಣಿಗೆ ನೀಡಿದ್ದಾರೆ. ತೆಂಡುಲ್ಕರ್ ಅವರ ಪ್ರತಿಷ್ಠಾನವು ಮಧ್ಯಪ್ರದೇಶದ ಬುಡಕಟ್ಟು ಸಮುದಾಯಗಳಿಗೆ ಪೋಷಣೆ ಹಾಗೂ ಶಿಕ್ಷಣವನ್ನು ಒದಗಿಸಲು ಸಹಕಾರಿಯಾಗಿದೆ. ಈ ಸೌಲಭ್ಯವು ಈಶಾನ್ಯ ರಾಜ್ಯದಲ್ಲಿ ಸಾಕಷ್ಟು ಕಡಿಮೆ ಸೌಲಭ್ಯ ಹೊಂದಿರುವ ಸಮುದಾಯಗಳಿಗೆ ನೆರವು ನೀಡುತ್ತದೆ.
Next Story





