ಐಪಿಎಲ್ ತಂಡಗಳ ಸಂಖ್ಯೆ ಹೆಚ್ಚಳ: ದ್ರಾವಿಡ್ ವಿಶ್ವಾಸ

ಹೊಸದಿಲ್ಲಿ: ದೇಶದಲ್ಲಿ ಲಭ್ಯವಿರುವ ಪ್ರತಿಭೆಗಳ ಗಾತ್ರ ಹಾಗೂ ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳದೆ ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನಷ್ಟು ತಂಡಗಳನ್ನು ವಿಸ್ತರಿಸಲು ಸಿದ್ದವಾಗಿದೆ ಎಂದು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಬಲವಾಗಿ ನಂಬಿದ್ದಾರೆ.
2021ರ ಐಪಿಎಲ್‌ನಲ್ಲಿ ಈಗಿನ 8 ತಂಡಗಳ ಬದಲಿಗೆ 9 ತಂಡಗಳನ್ನು, 2023ರಲ್ಲಿ 10 ತಂಡಗಳನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಇದು ಯಾವಾಗಲೂ ಬಿಸಿಸಿಐನ ದೀರ್ಘಕಾಲೀನ ಯೋಜನೆಯಾಗಿದೆ.
ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ನಿರ್ದೇಶಕರಾಗಿರುವ ದ್ರಾವಿಡ್, ರಾಜಸ್ಥಾನ ರಾಯಲ್ಸ್ ಸಹ ಮಾಲಕ ಮನೋಜ್ ಬದಾಲೆ ಅವರ 2021ರಲ್ಲಿ 9 ತಂಡಗಳು ಕಣಕ್ಕಿಳಿಯುವ ಸಾಧ್ಯತೆಯಿದೆ ಎಂಬ ಮಾತಿಗೆ ಧ್ವನಿಗೂಡಿಸಿದರು.
Next Story





