Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಮಧುಮೇಹ’ ಮನುಕುಲದ ಅಗೋಚರ ಶತ್ರು

‘ಮಧುಮೇಹ’ ಮನುಕುಲದ ಅಗೋಚರ ಶತ್ರು

ಇಂದು ಮಧುಮೇಹ ದಿನ

ವಾರ್ತಾಭಾರತಿವಾರ್ತಾಭಾರತಿ14 Nov 2020 12:03 AM IST
share

ನನ್ನ ‘ಮಧುಮೇಹ-ಮನುಕುಲದ ಅಗೋಚರ ಶತ್ರು’ ಕೃತಿ ಆರನೇ ಮುದ್ರಣವನ್ನು ಕಾಣುತ್ತಿದೆ. ಇದರಲ್ಲಿ ವಿಸ್ತೃತ ಹೊಸ ಅಧ್ಯಾಯಗಳನ್ನು ಸೇರಿಸಲಾಗಿದೆ. ಮಧುಮೇಹದಲ್ಲಿ ಮೂರು ವಿಧಗಳುಂಟು ಎಂಬುದನ್ನು ತೋರಿಸಲಾಗುತ್ತಿತ್ತು. ಆದರೆ ಈಗ ಆಹಾರ ಪದ್ಧತಿಗಳು ಬದಲಾಗುತ್ತಿರುವುದರಿಂದಲೂ ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ವಸ್ತುಗಳು ಸೇರ್ಪಡೆಯಾಗುತ್ತಿರುವುದರಿಂದಲೂ ಕೆಮಿಕಲ್ ಡಯಾಬಿಟಿಸ್ ಎಂಬ ಹೊಸ ವಿಧವಾದ ಮಧುಮೇಹ ಬಂದಿದೆ. ಜೊತೆಗೆ ಹದಿಹರೆಯದವರಲ್ಲಿ ಕಾಣಿಸಿಕೊಳ್ಳುವ (LADA type Diabetes) ಎಂಬುದನ್ನು ಕಂಡುಹಿಡಿಯಲಾಗಿದೆ. ಜೊತೆಗೆ (MODY) ಎಂಬ ಹೆಸರಿನ ಮಧುಮೇಹವನ್ನೂ ಸೇರಿಸಲಾಗಿದೆ.

ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಈಗ 77.9 ಮಿಲಿಯನ್. ಉಪವಾಸದ ವೇಳೆಯಲ್ಲೂ ಕುಗ್ಗದ ಗ್ಲೂಕೋಸ್ (IFG--&Impaired Fasting Glucose) ಹಂತದಲ್ಲಿರುವವರ ಸಂಖ್ಯೆ 24 ಮಿಲಿಯನ್. ಕ್ರಿ.ಶ. 2045ರ ವೇಳೆಗೆ ಈ ಹಂತಕ್ಕೆ ಬರುವವರ ಸಂಖ್ಯೆ 41 ಮಿಲಿಯನ್‌ಗೆ ಏರುವುದೆಂದು ಅಂದಾಜು ಮಾಡಲಾಗಿದೆ. ಅಂದರೆ ಇವರೆಲ್ಲರೂ ಒಂದಲ್ಲ ಒಂದು ದಿನ ಮಧುಮೇಹಿಗಳಾಗಿ ಪರಿವರ್ತನೆಯಾಗುತ್ತಾರೆ ಎಂದರ್ಥ!

ಭಾರತದಲ್ಲಿ ಮಧುಮೇಹದಿಂದ 60 ವರ್ಷಗಳೊಳಗಿನವರು ಪ್ರತಿಶತ 40ರಿಂದ 60ರಷ್ಟು ಜನ ಅಸುನೀಗುತ್ತಿದ್ದಾರೆ. ಜಾಗತಿಕವಾಗಿ 2019ರ ಅಂಕಿಅಂಶಗಳ ಪ್ರಕಾರ ಈಗ 463 ಮಿಲಿಯನ್ ಮಧುಮೇಹಿಗಳಿದ್ದಾರೆ ಮತ್ತು 2040ರ ವೇಳೆಗೆ 642 ಮಿಲಿಯನ್ ಆಗುವ ಸಂಭವವಿದೆ. ಪ್ರತಿ 11 ಯುವಕರಲ್ಲಿ ಒಬ್ಬರಿಗೆ ಮಧುಮೇಹವಿರುವುದು ಪತ್ತೆಯಾಗಿದೆ. ಇದು 2040ರ ವೇಳೆಗೆ ಪ್ರತಿ 10 ಯುವಕರಲ್ಲಿ ಒಬ್ಬರಿಗೆ ಮಧುಮೇಹ ಬರುವ ಸಂಭವವಿದೆ. ಏಳು ಮಂದಿ ಗರ್ಭಿಣಿಯರಲ್ಲಿ ಒಬ್ಬರು ಗರ್ಭಾವಸ್ಥೆಯ ಮಧುಮೇಹಿ (GDM) ಆಗಿರುವುದು ಗೊತ್ತಾಗಿದೆ. ಮಧುಮೇಹವು ದೇಹದ ಯಾವ ಅಂಗದ ಮೇಲೂ ದಯೆದಾಕ್ಷಿಣ್ಯ ತೋರುವುದಿಲ್ಲ. ಮಧುಮೇಹಿಗಳು ಮೂರು ಪಟ್ಟು ಅತಿ ರಕ್ತದೊತ್ತಡ, ನಾಲ್ಕು ಪಟ್ಟು ಹೃದ್ರೋಗಗಳು ಮತ್ತು ನಾಲ್ಕು ಪಟ್ಟು ಪಾರ್ಶ್ಚವಾಯುವಿಗೆ ಬಲಿಯಾಗುತ್ತಾರೆ. ಮಧುಮೇಹವು ಭಾರತೀಯರ ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮಗಳನ್ನುಂಟು ಮಾಡುವುದು ಬಿಳಿಯರಿಗಿಂತಲೂ 10ರಿಂದ 40ರಷ್ಟು ಹೆಚ್ಚು.

ಹಿಂದಿನ ಕಾಲದಂತೆ ಮಧುಮೇಹ ಕೇವಲ ಶ್ರೀಮಂತರಿಗೆ ಮತ್ತು ವಯೋವೃದ್ಧರಲ್ಲಿ ಅಲ್ಲದೆ, ಬಡವರು ಮತ್ತು ಚಿಕ್ಕ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ. ಮಧುಮೇಹ ಬ್ರಿಟನ್ ದೇಶದಲ್ಲಿರುವ ಬಿಳಿಯರಿಗಿಂತಲೂ ಅದೇ ದೇಶದಲ್ಲಿರುವ ಭಾರತೀಯ ಮಕ್ಕಳಲ್ಲಿ ಶೇ. 11ರಷ್ಟು ಹೆಚ್ಚು ಎಂಬುದು ಗೊತ್ತಾಗಿದೆ. ಸೂಕ್ಷ್ಮ ವಿಚಾರ ಏನೆಂದರೆ ಮಧುಮೇಹಿ ಪುರುಷರಲ್ಲಿ ಲೈಂಗಿಕ ಸಮಸ್ಯೆಗಳು ಇತರರಿಗಿಂತಲೂ ಹತ್ತು ವರ್ಷ ಮುಂಚಿತವಾಗಿ ಪ್ರಾರಂಭವಾಗುತ್ತವೆ. ನಿಮಗೆ ಇಷ್ಟವಿಲ್ಲದಿದ್ದರೂ ಈ ದಿನ ಮಧುಮೇಹ ನಿಮ್ಮ ಮನೆ ಬಾಗಿಲಿಗೆ ಬರುತ್ತಿರುವುದರಿಂದ ಇದು ಮನೆಮಾತಾಗಿದೆ. ಮಧುಮೇಹದಿಂದ ನಿಸ್ಸಂದೇಹವಾಗಿ ಭಾರತಕ್ಕೆ ದೊಡ್ಡ ಆರ್ಥಿಕ ಹೊರೆ ಬೀಳುತ್ತದೆ. ಇದನ್ನು ತಡೆಯದಿದ್ದರೆ ಇದು ಮಾನವನು ತನಗೆ ತಾನೇ ಸೃಷ್ಟಿಸಿಕೊಂಡ ಅತಿ ದೊಡ್ಡ ಗಂಡಾಂತರವಾಗುತ್ತದೆ. ಇದಕ್ಕೆ ಕಾರಣ ನಾವೇ! ನಮ್ಮ ಸ್ವಯಂಕೃತ ಅಪರಾಧದಿಂದ ನಾವು ಮಧುಮೇಹಿಗಳಾಗುತ್ತಿದ್ದೇವೆ. ಏಕೆಂದರೆ ನಾವು ಮಧುಮೇಹವನ್ನು ತರಬಲ್ಲ ನಮ್ಮ ವಂಶವಾಹಿಗಳನ್ನು ಬಡಿದೆಬ್ಬಿಸುತ್ತಿದ್ದೇವೆ. ಈಗ ನಾವು ನಮ್ಮ ಜೀವನ ಶೈಲಿಯನ್ನು ಆರೋಗ್ಯದ ದಿಕ್ಕಿನಿಂದ ಅನಾರೋಗ್ಯದ ದಿಕ್ಕಿಗೆ ಬದಲಾಯಿಸಿಕೊಳ್ಳುತ್ತಿದ್ದೇವೆ. ಮೂರು ಸಾವಿರ ವರ್ಷಗಳ ಹಿಂದೆ ಚರಕಸಂಹಿತೆಯಲ್ಲಿ ಹೇಳಿರುವ ಆಚಾರ, ಆಹಾರ, ಪ್ರಾಣಾಯಾಮ ಮತ್ತು ಶಾಂತಚಿತ್ತದಿಂದ ಕೂಡಿದ ಆರೋಗ್ಯದ ಸೂತ್ರಗಳನ್ನು ಮರೆತು, ಕೇವಲ ಆಧುನಿಕ ಶೈಲಿಯನ್ನೇ ಅನುಸರಿಸುತ್ತಿರುವುದರಿಂದ ಮಧುಮೇಹವು ಸಾಂಕ್ರಾಮಿಕ ವ್ಯಾಧಿಯ ರೂಪದಲ್ಲಿ ತಲೆ ಎತ್ತುತ್ತಿರುವುದಕ್ಕೆ ಕಾರಣವಾಗಿದೆ.

ನಾವು ಅವಶ್ಯಕತೆಗಿಂತಲೂ ಹೆೆಚ್ಚಿಗೆ ತಿನ್ನುತ್ತಿದ್ದೇವೆ. ಕಡಿಮೆ ಪೌಷ್ಟಿಕಾಂಶದ ‘ಜಂಕ್ ಫುಡ್‌‘ ಅನ್ನು ಸೇವಿಸುತ್ತಿದ್ದೇವೆ. ನಮ್ಮ ಸ್ವಭಾವದಿಂದಲೋ ನಗರ ಜೀವನದ ಅನಿವಾರ್ಯತೆಗಳಿಂದಲೋ ಜನತೆ ಈಗ ಮಾನಸಿಕ ಒತ್ತಡಗಳಿಗೆ ಗುರಿಯಾಗುತ್ತಿದೆ. ಇದರಿಂದ ಮಧುಮೇಹ ಶೀಘ್ರಗತಿಯಲ್ಲಿ ಬೆಳೆಯುತ್ತಿದೆ. ಮಧುಮೇಹ ಬಗ್ಗೆ ಸಮಗ್ರ ತಿಳುವಳಿಕೆ ನೀಡುವುದೇ ಈ ಕೃತಿಯ ಉದ್ದೇಶ. ಈ ಗ್ರಂಥರಚನೆಯಲ್ಲಿ ನನ್ನ ಪುತ್ರ ಡಾ.ಸೂರಜ್ ತೇಜಸ್ವಿ ಅಮೆರಿಕದ ಕ್ಯಾಲಿಪೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಧುಮೇಹ ಕುರಿತು ಮಹತ್ವಪೂರ್ಣ ವೈಜ್ಞಾನಿಕ ಸಂಗತಿಗಳನ್ನು ಕಲೆಹಾಕುವಲ್ಲಿ ನೆರವಾಗಿದ್ದಾರೆ. ನಾವಿಬ್ಬರೂ ಸೇರಿ ಮಧುಮೇಹ ಕುರಿತಂತೆ ಪ್ರಪಂಚದಲ್ಲಿ ಲಭ್ಯವಿರುವ ವೈಜ್ಞಾನಿಕ ಆಧಾರಗಳನ್ನು ಪರಿಶೀಲನೆ ಮಾಡಿದ್ದೇವೆ. ಮಧುಮೇಹ ವ್ಯಾಧಿಯಲ್ಲಿ 20ವರ್ಷಗಳ ಆಳವಾದ ಅನುಭವ, ದಿಲ್ಲಿಯ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆಯಲ್ಲಿ ನಡೆಸಿರುವ ಸಂಶೋಧನೆಗಳ ಆಧಾರ, ಶ್ರೀಹರಿ ಡಯಾಬಿಟಿಸ್ ಸಂಸ್ಥೆ, ಕುವೆಂಪುನಗರ, ಮೈಸೂರು ಇಲ್ಲಿ ನಡೆಸಿರುವ ಸಂಶೋಧನೆಗಳು ಹಾಗೂ ಮಧುಮೇಹ ವ್ಯಾಧಿಯ ಕುರಿತು ಆಸ್ಟ್ರೇಲಿಯ ದೇಶದ ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಆಳವಾದ ಅಧ್ಯಯನದ ಫಲ ಈ ಕೃತಿಯಲ್ಲಿ ಮುಪ್ಪುರಿಗೊಂಡಿದೆ.

ಕೃತಿಯ ವಿಷಯವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. 1ನೆಯ ಭಾಗದಲ್ಲಿ ಮಧುಮೇಹ ಕುರಿತ ಮೂಲಭೂತ ಆಧಾರ ತತ್ವಗಳ ತಿಳುವಳಿಕೆಗಳನ್ನು, 2ನೆಯ ಭಾಗದಲ್ಲಿ ಮಧುಮೇಹದಿಂದ ಉದ್ಭವಿಸುವ ತೊಡಕುಗಳನ್ನು ಮತ್ತು 3ನೆಯ ಭಾಗದಲ್ಲಿ ಪರಿಹಾರಗಳನ್ನು ಒಟ್ಟು 29 ಅಧ್ಯಾಯಗಳಲ್ಲಿ ಪರಿಶೀಲಿಸಲಾಗಿದೆ. ಈ ಕೃತಿಯಲ್ಲಿ ಅತ್ಯಂತ ಸುಲಭವಾಗಿ, ಆದರೆ ಅತ್ಯಂತ ಪರಿಣಾಮ ಕಾರಿಯಾಗಿ ಮಧುಮೇಹವನ್ನು ಎದುರಿಸುವ ವಿಧಾನವನ್ನು ತಿಳಿಸಲಾಗಿದೆ. ಉದಾಹರಣೆಗೆ ಮಧುಮೇಹದ ಆಹಾರದಲ್ಲಿ ಮಂದಗತಿಯಲ್ಲಿ ಜೀರ್ಣವಾಗುವ ಗುಣವಿರುವ ಪಿಷ್ಟ ಪದಾರ್ಥಗಳು ಶೀಘ್ರಗತಿಯಲ್ಲಿ ಜೀರ್ಣವಾಗುವ ಪಿಷ್ಟ ಪದಾರ್ಥಗಳಿಗಿಂತಲೂ ಉತ್ತಮವಾದವುಗಳು ಮತ್ತು ಇವುಗಳಿಂದ ಮೇದೋಜೀರಕಾಂಗದ ಮೇಲೆ ಒತ್ತಡ ಬೀಳುವುದೂ ಕಡಿಮೆ ಎಂಬ ವಿಚಾರ; ಹಾಗೂ ಸಸ್ಯಜನ್ಯ ಪ್ರೋಟೀನ್- ಉದಾಹರಣೆಗೆ ಬೇಳೆಕಾಳು- ಇತ್ಯಾದಿಗಳಿಂದ ಹಸಿವು ಕಡಿಮೆಯಾಗಿ ಆಹಾರ ಸೇವನೆ ಕಡಿಮೆ ಆಗುತ್ತದೆಂಬುದನ್ನೂ ಮತ್ತು ಸಕ್ಕರೆ ಅಂಶ ಕಡಿಮೆ ಆಗುವುದರಿಂದ ಮಧುಮೇಹ ಕಡಿಮೆ ಆಗುತ್ತದೆಂಬ ವಿಚಾರಗಳನ್ನೂ ತಿಳಿಸಲಾಗಿದೆ. ಆರೋಗ್ಯಕರವಾದ ಎಣ್ಣೆಗಳು ಭಾರತೀಯ ಸಂಬಾರ ಪದಾರ್ಥಗಳಾದ ಜೀರಿಗೆ, ಮೆಂತ್ಯ, ಮೆಣಸು, ಸಾಸುವೆ ಎಣ್ಣೆ ಇವುಗಳ ಬಳಕೆಯಿಂದ ಸಕ್ಕರೆ ಅಂಶ ಕಡಿಮೆ ಆಗುತ್ತದೆಂಬುದನ್ನೂ, ವ್ಯಾಯಾಮ ಮಾಡುವುದರಿಂದ ಶೇ.71 ಮಧುಮೇಹ ಬರುವುದನ್ನು ತಡೆಗಟ್ಟಬಹುದೆಂಬುದನ್ನೂ, ಪ್ರತಿ ಕಿಲೋಗ್ರಾಂ ತೂಕವನ್ನು ತಗ್ಗಿಸುವುದರಿಂದ ಶೇ.16ರಷ್ಟು ಮಧುಮೇಹ ಬರುವುದನ್ನು ತಡೆಗಟ್ಟಬಹುದೆಂಬುದನ್ನೂ ವೈಜ್ಞಾನಿಕ ಆಧಾರಗಳ ಮೂಲಕ ಈ ಕೃತಿಯಲ್ಲಿ ತಿಳಿಸಲಾಗಿದೆ. ಯೋಗಾಭ್ಯಾಸದಿಂದ 3 ತಿಂಗಳ ಅವಧಿಯಲ್ಲಿ ಸಕ್ಕರೆ ಅಂಶ ಕಡಿಮೆ ಆಗುತ್ತದೆ ಎಂಬ ವೈಜ್ಞಾನಿಕ ಅಂಶವನ್ನು ಸಂಕ್ಷಿಪ್ತವಾಗಿ ಈ ಕೃತಿಯಲ್ಲಿ ತಿಳಿಸಲಾಗಿದೆ.

ಡಾ.ವಿ.ಲಕ್ಷ್ಮೀನಾರಾಯಣ್ (ಮುನ್ನುಡಿಯಿಂದ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X