ಇರಾ: ಶಾಸಕ ಖಾದರ್ ರಿಂದ ಶಾಲಾ ಸೇತು ಕಾಮಗಾರಿ ಪರಿಶೀಲನೆ

ಬಂಟ್ವಾಳ, ನ.14: ಕರ್ನಾಟಕ - ಕೇರಳ ರಾಜ್ಯಗಳ ಗಡಿ ಪ್ರದೇಶದ ಇರಾ ಗ್ರಾಮದ ಬಾಳೆಪುಣಿ ಕುದುಂಬುವಳಚ್ಚಿಲ್ ಎಂಬಲ್ಲಿ ನಿರ್ಮಾಣ ವಾಗುತ್ತಿರುವ ಕಿರು ಸೇತುವೆಯ ಕಾಮಗಾರಿಯನ್ನು ಶಾಸಕ ಯು.ಟಿ.ಖಾದರ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮಸ್ಥರ ಬೇಡಿಕೆಯ ಮೇರೆಗೆ ಪಿಡ್ಲ್ಯೂಡಿ ಇಲಾಖೆಯ ಮೂಲಕ ಯು.ಟಿ.ಖಾದರ್ ಮಾಡಿರುವ ಶಿಫಾರಸಿನ ಮೇರೆಗೆ 15 ಲಕ್ಷ ರೂ. ಅಂದಾಜು ಮೊತ್ತದಲ್ಲಿ ಶಾಲಾ ಸೇತು ಕಿರು ಸೇತುವೆ ನಿರ್ಮಾಣವಾಗುತ್ತಿದ್ದೆ. ಶಾಸಕ ಯು.ಟಿ.ಖಾದರ್ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಸೇತುವೆಯ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಸ್ತೆಯನ್ನು ಅಭಿವೃದ್ಧಿ ಮಾಡುವ ಭರವಸೆ ಯನ್ನು ಯು.ಟಿ.ಖಾದರ್ ಗ್ರಾಮಸ್ಥರಿಗೆ ನೀಡಿದ್ದಾರೆ ಎಂದು ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವರ್ಕಾಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಮಜೀದ್ ಪಿ.ಬಿ.,ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಎಂ.ಬಿ.ಉಮ್ಮರ್, ಮೊಯ್ದುಕುಂಞಿ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಸೈನಾರ್, ಸ್ಥಳೀಯ ಗಣ್ಯರಾದ ಸತ್ತಾರ್ ಬಾಳೆಪುಣಿ, ಮುಹಮ್ಮದ್ ಹಾಜಿ ಇನ್ನಿತರರು ಉಪಸ್ಥಿತರಿದ್ದರು.









