ನ.15 ರಂದು ಸಜೀಪ ಉಸ್ತಾದ್ ಆಂಡ್ ನೇರ್ಚೆ, ಸರಳ ವಿವಾಹ ಕಾರ್ಯಕ್ರಮ
ಬಂಟ್ವಾಳ, ನ.14: ಸಜಿಪ ಕೇಂದ್ರ ಜುಮಾ ಮಸೀದಿ ಇದರ ಆಶ್ರಯದಲ್ಲಿ ವರ್ಷಂಪ್ರತೀ ನಡೆಸಿಕೊಂಡು ಬರುತ್ತಿರುವ ಶೈಖುನಾ ಮರ್ಹೂಂ ಸಜೀಪ ಉಸ್ತಾದ್ ರವರ 26ನೇ ಆಂಡ್ ನೇರ್ಚೆ ಹಾಗೂ ಒಂದು ಜೋಡಿ ಸರಳ ವಿವಾಹ ಕಾರ್ಯಕ್ರಮ ನ.15 ರಂದು ರವಿವಾರ ಬೆಳಗ್ಗೆ 11 ಗಂಟೆಗೆ ಜುಮಾ ಮಸೀದಿ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಜುಮ್ಮಾ ಮಸೀದಿ ಖತೀಬ್ ಉಸ್ತಾದ್ ಅಲ್ಹಾಜ್ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ವಹಿಸಲಿದ್ದು, ಮಂಗಳೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಶೈಖ್ ಅಬ್ದುಲ್ಲಾ ಉಸ್ತಾದ್, ನೂರಿಯಾ ಕೇಂದ್ರ ಮದ್ರಸ ಸ್ಟಾಫ್ ಕೌನ್ಸಿಲ್, ಜಮಾಅತ್ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ ರಝಾಕ್, ಪ್ರದಾನ ಕಾರ್ಯದರ್ಶಿ ಎಸ್.ಕೆ.ಮಹಮ್ಮದ್, ಸಜಿಪ ಉಸ್ತಾದ್‌ರವರ ಉಲಮಾ ಶಿಷ್ಯಂದಿರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





