ಉಡುಪಿ ಬ್ರೈಡಲ್ ವರ್ಲ್ಡ್‌ನಲ್ಲಿ ದೀಪಾವಳಿ ಹಬ್ಬದ ವಿಶೇಷ ರಿಯಾಯಿತಿ ಮಾರಾಟ

ಉಡುಪಿ, ನ.14: ನಗರದ ಸಿಟಿ ಬಸ್‌ನಿಲ್ದಾಣ ಬಳಿಯ ಮಸೀದಿ ರಸ್ತೆಯ ಅಕ್ಷಯ ಟವರ್‌ನಲ್ಲಿ ಹೊಸತನದೊಂದಿಗೆ ಶುಭಾರಂಭಗೊಂಡ ಸಂಪೂರ್ಣ ಹವಾನಿಯಂತ್ರಿತ ವಿಶಾಲವಾದ ಸ್ಪೆಷಲ್ ವೆರೈಟಿ ಬಟ್ಟೆಗಳ ನೂತನ ಸಂಗ್ರಹ ಹೊಂದಿರುವ ಬೃಹತ್ ಬಟ್ಟೆ ಮಳಿಗೆ ‘ಬ್ರೈಡಲ್ ವರ್ಲ್ಡ್’ ಡಿಸೈನರ್ ಶಾಪ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಮಾಾಟವನ್ನು ಹಮ್ಮಿಕೊಳ್ಳಲಾಗಿದೆ.
ಪ್ರತ್ಯೇಕ ಕೌಂಟರ್‌ಗಳನ್ನು ಒಳಗೊಂಡ ಈ ಮಳಿಗೆಯಲ್ಲಿ ರೆಡಿಮೇಡ್ ಡ್ರೆಸ್ಸಸ್, ಟೆಕ್ಸ್‌ಟೈಲ್ಸ್, ಮದುವೆ ಸೀರೆ, ಕಾಂಜೀವರಂ, ಕಾಂಜೀವರಂ ಸಿಲ್ಕ್ಸ್, ಡಿಸೈನರ್ ಸೀರೆ, ಸಿಲ್ಕ್ ಸೀರೆ, ಫ್ಯಾನ್ಸಿ ಸೀರೆ, ಕಾಟನ್ ಸೀರೆ, ಸಲ್ವಾರ್ಸ್, ಸಲ್ವಾರ್ ಮೆಟೀರಿಯಲ್ಸ್, ಶೆರ್ವಾನಿ, ಶರ್ಟ್ಸ್, ಟಿ-ಶರ್ಟ್ಸ್, ಬ್ರೈಡಲ್ ಗೌನ್, ಕ್ರಾಕ್ ಟಾಪ್, ಗಾಗ್ರಾ, ಗಾಗ್ರಾ ಮೆಟೀರಿಯಲ್ಸ್, ರೀಹಾ ಫ್ಯಾಶನ್, ಬೇಬಿ ವರ್ಲ್ಡ್ ನಲ್ಲಿ ಕಿಡ್ಸ್‌ವೇರ್, ಕಿಡ್ಸ್ ಫ್ರಾಕ್, ಕಿಡ್ಸ್ ಟಾಯ್, ಕುರ್ತೀಸ್, ಟಾಪ್ಸ್, ಜಂಟ್ಸ್ ಜೀನ್ಸ್, ಗೌನ್ಸ್, ಜಿಟಿಎಸ್, ಫ್ರಾಕ್ಸ್, ಶರ್ಟ್ಸ್, ಪ್ಯಾಂಟ್, ಯುವಕ- ಯುವತಿಯರ ಫ್ಯಾಶನ್ಸ್ ಉಡುಪುಗಳ ನೂತನ ಸಂಗ್ರಹವಿದ್ದು, ಹೊಸ ವಿನ್ಯಾಸದ ಫ್ಯಾಮಿಲಿ ಶಾಪ್ ಇದಾಗಿದೆ.
ಒಂದೇ ಸೂರಿನಡಿ ಎಲ್ಲ ವಯೋವರ್ಗದವರಿಗೆ ಬೇಕಾಗುವ, ಉತ್ತಮ ದರ್ಜೆಯ, ಗ್ರಾಹಕರ ಕೈಗೆಟಕುವ ದರದ ಬಟ್ಟೆಗಳನ್ನು ಹೊಂದಿರುವ ಮಳಿಗೆಯು ಪಾರ್ಕಿಂಗ್ ವ್ಯವಸ್ಥೆ, ಕ್ರೆಡಿಟ್ ಕಾರ್ಡ್ ಸೇವೆಗಳನ್ನು ಒದಗಿಸಲಿದೆ. ಅನುಭವಿ ಸೇಲ್ಸ್‌ಮ್ಯಾನ್‌ಗಳಿರುವ ಇಲ್ಲಿ ಗ್ರಾಹಕರ ಆಯ್ಕೆಗೆ ಹೆಚ್ಚಿನ ಅವಕಾಶ ಕಲ್ಪಿಸ ಲಾಗಿದೆ. ನೆಲ ಮಹಡಿಯಲ್ಲಿ ಮಹಿಳೆಯರ ಉಡುಗೆ-ತೊಡುಗೆಗಳು, ಬಗೆ ಬಗೆಯ ಸುಗಂಧ ದ್ರವ್ಯಗಳು, ಬ್ಯಾಗ್‌ಗಳು ದೊರೆಯಲಿದ್ದು, ಪ್ರಥಮ ಮಹಡಿಯಲ್ಲಿ ಪುರುಷರು, ಮಕ್ಕಳಿಗೆ ಬೇಕಾಗುವ ಎಲ್ಲ ಉಡುಪುಗಳು ಲಭ್ಯ ಇವೆ.
ಹಲವಾರು ವರ್ಷಗಳಿಂದ ವಸ್ತ್ರ ವೈವಿಧ್ಯಗಳ ವ್ಯವವಹಾರದಲ್ಲಿ ಅನುಭವವುಳ್ಳ ಸಂಸ್ಥೆಯ ಮಳಿಗೆಯು ಕುಂದಾಪುರದಲ್ಲಿ ಕಾರ್ಯಾಚರಿಸುತ್ತಿದೆ. ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಸರಕಾರದ ಆದೇಶದನ್ವಯ ಎಲ್ಲ ನಿಯಮಗಳನ್ನು ಮಳಿಗೆಯಲ್ಲಿ ಪಾಲಿಸಲಾಗುವುದು ಎಂದು ಸಂಸ್ಥೆಯ ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.







