ಎಐವೈಎಫ್, ಎನ್‌ಎಫ್‌ಐಡಬ್ಲ್ಯು ಸಂಘಟನೆಗೆ ಪದಾಧಿಕಾರಿಗಳ ಆಯ್ಕೆ
ಮಂಗಳೂರು, ನ.14: ಅಖಿಲ ಭಾರತ ಯುವಜನ ಒಕ್ಕೂಟ (ಎಐವೈಎಫ್) ಹಾಗೂ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಮಂಗಳೂರು ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಎಐವೈಎಫ್ ಅಧ್ಯಕ್ಷರಾಗಿ ಪುಷ್ಪರಾಜ ಬೋಳೂರು, ಉಪಾಧ್ಯಕ್ಷರಾಗಿ ಕೃಷ್ಣಪ್ಪಪಿಲಿಕುಲ, ಕಾರ್ಯದರ್ಶಿಗಳಾಗಿ ಜಗತ್‌ಪಾಲ್ ಕೋಡಿಕಲ್, ಜೊತೆ ಕಾರ್ಯದರ್ಶಿಗಳಾಗಿ ಸುಧಾಕರ್ ಕಲ್ಲೂರು, ಕೋಶಾಧಿಕಾರಿಯಾಗಿ ರಘು ಮಾಲೆಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ. ಸವಿತಾ ಸುವರ್ಣ ಬಜಾಲ್, ಲಲಿತಾ ಸಿದ್ಧಾರ್ಥನಗರ, ಯಶೋಧ ಪೊರ್ಕೊಡಿ, ದಿನೇಶ್ ಬಂಟ್ವಾಳ್, ಶಂಕರ್ ಉರ್ವ, ಭರತೇಶ್ ಕಾವೂರು, ಹರೀಶ್ ಪಲಿಮಾರ್, ರಮೇಶ್ ಪುತ್ರನ್ ಕರ್ನಿರೆ ಆಯ್ಕೆಯಾಗಿದ್ದಾರೆ.
ಎನ್‌ಎಫ್‌ಐಡಬ್ಲ್ಯು ಅಧ್ಯಕ್ಷರಾಗಿ ರೂಪಾವತಿ ಸಿದ್ದಾರ್ಥನಗರ, ಉಪಾಧ್ಯಕ್ಷರಾಗಿ ಮೀನಾಕ್ಷಿ ಶಾಂತಿಪಲ್ಕೆ, ಕಾರ್ಯದರ್ಶಿಯಾಗಿ ಸುಲೋಚನ ಕವತಾರು, ಜೊತೆ ಕಾರ್ಯದರ್ಶಿಯಾಗಿ ವಾರಿಜಾ ಬಜಪೆ, ಕೋಶಾಧಿಕಾರಿಯಾಗಿ ಚಿತ್ರಾಕ್ಷಿ ಉಚ್ಚಿಲ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಮಿಳಾ ಕೆ. ಮಾರಿಪಲ್ಲ, ದಯಾವತಿ ಕರ್ನಿರೆ, ಶಾಂತಾ ಕಳವಾರ್, ಪುಷ್ಪಾ ಶೆಟ್ಟಿ ಉರ್ವ, ಪದ್ಮಿನಿ ಕರ್ನಿರೆ, ಡಾ. ಸವಿತಾ ಸುವರ್ಣ ಬಜಾಲ್ ಆಯ್ಕೆಯಾಗಿದ್ದಾರೆ.





