ವೈದ್ಯಕೀಯ ಶುಲ್ಕ ಹೆಚ್ಚಳಕ್ಕೆ ವೈಟ್ ಸ್ಪಾರ್ಕ್ ಖಂಡನೆ
ಬೆಂಗಳೂರು, ನ.14: ರಾಜ್ಯ ಸರಕಾರ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶುಲ್ಕಗಳನ್ನು ಹೆಚ್ಚಿಸಿರುವುದನ್ನು ವೈಟ್ ಸ್ಪಾರ್ಕ್ (ವೈದ್ಯಕೀಯ ವಿದ್ಯಾರ್ಥಿಗಳ ತಂಡ) ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶುಲ್ಕಗಳನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಮುಂದಿಟ್ಟಾಗ ಕಳೆದ ತಿಂಗಳಿನಲ್ಲಿ ಅದಕ್ಕೆ ಬಲವಾದ ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೂ ರಾಜ್ಯ ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ನಿಂತಿರುವುದು ವಿಷಾದದ ಸಂಗತಿಯಾಗಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ಸಂದಷ್ಟದ ಸಂದರ್ಭದಲ್ಲಿ ಜನತೆ ನಿರುದ್ಯೋಗ ಕಳೆದುಕೊಂಡಿದ್ದಾರೆ. ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಗಾಯದ ಮೇಲೆ ಬರೆ ಎಳೆದಿದೆ. ಇದು ಜವಾಬ್ದಾರಿಯುತ ಸರಕಾರದ ಲಕ್ಷಣವಲ್ಲವೆಂದು ಅರೋಪಿಸಿದೆ.
ಸಾವಿರಾರು ವೈದ್ಯರು, ಹಾಗೂ ವೈದ್ಯಕೀಯ ಸಿಬ್ಬಂದಿಗಳು ಕೋವಿಡ್‍ಗೆ ತುತ್ತಾದರು. ನೂರಕ್ಕೂ ಹೆಚ್ಚು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಅರ್ಪಿಸಿದರು. ಆದರೆ, ರಾಜ್ಯ ಸರಕಾರ ವೈದ್ಯರಿಗೆ ಅವಮಾನಿಸುವ ರೀತಿಯಲ್ಲಿ ವೈದ್ಯಕೀಯ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ವೈಟ್ ಸ್ಪಾರ್ಕ್ಸ್ ರಾಜ್ಯ ಸಂಚಾಲಕ ಹಣವಂತ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.





